Saturday, August 23, 2025
Google search engine
HomeUncategorizedPower Impact : 'ಡೀಲ್ ರಾಜ'ಗೆ ಮತ್ತೊಂದು 'ಸಂ'ಕಷ್ಟ! : ಟಿ.ಜೆ ಅಬ್ರಹಾಂ ವಿರುದ್ಧ FIR...

Power Impact : ‘ಡೀಲ್ ರಾಜ’ಗೆ ಮತ್ತೊಂದು ‘ಸಂ’ಕಷ್ಟ! : ಟಿ.ಜೆ ಅಬ್ರಹಾಂ ವಿರುದ್ಧ FIR ದಾಖಲು

ಬೆಂಗಳೂರು : ಡೀಲ್‌ ರಾಜ ಟಿ.ಜೆ ಅಬ್ರಹಾಂನ ಅಸಲಿ ಮುಖವಾಡವನ್ನ ‘ಪವರ್ ಟಿವಿ’ ಸಾಕ್ಷಿ ಸಮೇತ ಬಯಲು ಮಾಡಿತ್ತು. ಕೆಎಎಸ್​ ಅಧಿಕಾರಿ ಡಾ. ಸುಧಾ ಕೊಟ್ಟ ಟಾರ್ಚರ್​. ಡೀಲ್​ ಬಗ್ಗೆ ರಾಜ್ಯದ ಜನತೆ ಮುಂದೆ ಅನಾವರಣ ಮಾಡಿತ್ತು. ಇದೀಗ ನೌಟಂಕಿ ಹೋರಾಟಗಾರನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೌದು, ಡಾ.ಸುಧಾ ಕೊಟ್ಟ ದೂರಿನನ್ವಯ, ಸೋಕಾಲ್ಡ್​ ಸಾಮಾಜಿಕ ಹೋರಾಟಗಾರನ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದು ಪವರ್ ಟಿವಿ ಸ್ಟಿಂಗ್​ ಆಪರೇಷನ್​ನ ಬಿಗ್ಗೆಸ್ಟ್ ಇಂಪ್ಯಾಕ್ಟ್​.

ಹೋರಾಟಗಾರನ ಮುಖವಾಡ ಧರಿಸಿರೋ ಸೋಕಾಲ್ಡ್​ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ, ಅಸಲಿಯತ್ತನ್ನ ‘ಪವರ್ ಟಿವಿ’ ಎಳೆ ಎಳೆಯಾಗಿ ಬಿಚ್ಚಿತ್ತು. ಕೆಎಎಸ್​ ಅಧಿಕಾರಿಗೆ ಕೊಡ್ತಿದ್ದ ಟಾರ್ಚರ್​ ಬಗ್ಗೆ ಸ್ವತಃ ಡಾ.ಸುಧಾ ಅವರ ತಂದೆಯೇ ಅಳಲು ತೋಡಿಕೊಂಡಿದ್ದರು. ಇದೀಗ KAS ಅಧಿಕಾರಿ ಡಾ.ಸುಧಾ ಕೊಟ್ಟ ದೂರು ಆಧರಿಸಿ ಕೊಡಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

1 ಕೋಟಿಗೆ ಡೀಲ್ ಕುದುರಿಸಿದ್ದ

KAS ಅಧಿಕಾರಿ ಡಾ.ಸುಧಾಗೆ ಟಾರ್ಚರ್ ಮೇಲೆ ಟಾರ್ಚರ್‌ ಕೊಡ್ತಿದ್ದ ಅಬ್ರಹಾಂ, ಕೋಟಿ ಕೋಟಿ ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡ್ತಿದ್ದ. 100 ಕೋಟಿ ಡಿಮ್ಯಾಂಡ್ ಮಾಡಿ ಕೊನೆಗೆ 1 ಕೋಟಿಗೆ ಡೀಲ್ ಕುದುರಿಸಿದ್ದ. ಅಡ್ವಾನ್ಸ್ ಆಗಿ 25 ಲಕ್ಷ ರೂಪಾಯಿ ಪಡೆಯುವಾಗ ಪವರ್ ಟಿವಿ ಸ್ಟಿಂಗ್‌ನಲ್ಲಿ ರೆಡ್‌ ಹ್ಯಾಂಡ್‌ ಆಗಿ ತಗ್ಲಾಕೊಂಡಿದ್ದ. ಡೀಲ್‌ ವೀರನ ವಿರುದ್ಧ ಡಾ.ಸುಧಾ ದೂರು ಕೊಟ್ಟಿದ್ದರು. ಐಪಿಸಿ ಸೆಕ್ಷನ್‌ 384, 509, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ‘ಪವರ್’ ಟಿವಿ ಕಚೇರಿಗೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಭೇಟಿ

FIR ದಾಖಲಾಗ್ತಿದ್ದಂತೆ ಎಸ್ಕೇಪ್​!

ಇನ್ನು, ಎಫ್​ಐಆರ್​​ ದಾಖಲಾಗ್ತಿದ್ದಂತೆ ಟಿ.ಜೆ ಅಬ್ರಹಾಂ ನಾಪತ್ತೆಯಾಗಿದ್ದಾನೆ. ಇತ್ತ ಮನೆಯಲ್ಲೂ ಇಲ್ಲ. ಕಚೇರಿಯಲ್ಲೂ ಕಾಣ್ತಿಲ್ಲ. ಡಾ. ಸುಧಾ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆಗಿಳಿದ ಕೊಡಿಗೆಹಳ್ಳಿ ಪೊಲೀಸರು, ಮನೆ ಹಾಗೂ ಕಚೇರಿ ಬಳಿ ಮಹಜರ್ ನಡೆಸಿದ್ರು. ಆದ್ರೆ, ಇಂದಿರಾನಗರದಲ್ಲಿರೋ ಟಿ.ಜೆ ಅಬ್ರಹಾಂ ಮನೆ ಹಾಗೂ ಕಚೇರಿಗೆ ಬೀಗ ಹಾಕಿ ಪರಾರಿ ಆಗಿದ್ದಾನೆ.

ಒಟ್ಟಾರೆ, ಅಧಿಕಾರಿಗಳನ್ನು ಬೆದರಿಸಿ ದರ್ಪದಿಂದ ಮೆರೆಯುತ್ತಿದ್ದ ಓಲಾಟಗಾರನ ಮುಖವಾಡವನ್ನು‌ ಕನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ಪವರ್ ಟಿವಿ ಕಳಚಿದೆ. ಇದೀಗ ಡೀಲ್​ ರಾಜನ ವಿರುದ್ದ ಎಫ್ ಐಆರ್ ದಾಖಲಾಗಿದ್ದು, ಪವರ್ ಟಿವಿ ಸ್ಟಿಂಗ್​ ಆಪರೇಷನ್​ಗೆ ರಾಜ್ಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments