Site icon PowerTV

ಯತ್ನಾಳ್ ಹೇಳಿದ ಹಾಗೆ ನಮ್ಮ ಸರ್ಕಾರ ನಡೆಯೋದಿಲ್ಲ : ಎಂ.ಬಿ ಪಾಟೀಲ್

ವಿಜಯಪುರ : ಶಾಸಕ ಯತ್ನಾಳ್ ಹೇಳಿದ ಹಾಗೆ ನಮ್ಮ ಸರ್ಕಾರ ನಡೆಯೋದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಗುಡುಗಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯತ್ನಾಳ್ ಹೇಳಿದಂತೆ ನಾವು ನಡೆಯಬೇಕು ಅಂತಾನು ಇಲ್ಲ. ಯಾರು ಅಪರಾಧಿಗಳು ಅವರಿಗೆ ಶಿಕ್ಷೆ ಆಗುತ್ತೆ. ಯಾರು ನಿರಪರಾಧಿಗಳಿ ಅವರಿಗೆ ಅನ್ಯಾಯವಾಗಲ್ಲ ಎಂದು ಹೇಳಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ, ಮಂಗಳೂರು  ಗಲಭೆ ಆರೋಪಿಗಳ ಮೇಲಿನ ಪ್ರಕರಣ ಕೈ ಬಿಡುವಂತೆ ತನ್ವೀರ್ ಸೇಠ್ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿ, ಇದು ರೊಟೀನ್ ವಿಚಾರ. ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು, ನಿರಪರಾಧಿಗಳಿಗೆ ತೊಂದರೆ ಆಗಬಾರದು ಎಂದು ತಿಳಿಸಿದ್ದಾರೆ.

ಪರಮೇಶ್ವರ್ ಪರ ಎಂಬಿಪಿ ಬ್ಯಾಟ್

ತನಿಖೆ ನಡೆದ ಬಳಿಕ ಯಾರು ಅಮಾಯಕರು, ಅಪರಾಧಿಗಳು ಅಂತ ಗೊತ್ತಾಗುತ್ತದೆ. ಅಪರಾಧಿಗಳು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಯಾವುದೇ ಪಕ್ಷ, ಜಾತಿ, ಧರ್ಮದವರಾಗಿದ್ದರು ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ನಿರಪರಾಧಿಗಳಿದ್ದರೇ ಯಾವುದೇ ಪಕ್ಷ, ಜಾತಿ, ಧರ್ಮ, ಯಾರೇ ಇದ್ದರು ಅನ್ಯಾಯವಾಗಬಾರದು. ಆ ದೆಸೆಯಲ್ಲಿ ಗೃಹ ಸಚಿವರು ಕೆಲಸ ಮಾಡ್ತಾರೆ ಎಂದು ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.

Exit mobile version