Site icon PowerTV

ಪೊಲೀಸರಿಗೆ ಸಿಹಿಸುದ್ದಿ: ಹುಟ್ಟುಹಬ್ಬಕ್ಕೆ ರಜೆ ಭಾಗ್ಯ!

ಬೆಂಗಳೂರು: ಪೊಲೀಸ್​ ಅಧಿಕಾರಿಗಳು ತಮ್ಮ ಹುಟ್ಟಿದ ಹಬ್ಬದ ದಿನವೂ ಕುಟುಂಬಕ್ಕೆ ಸಮಯ ನೀಡಲಾಗದೆ ಪರದಾಡುತ್ತಿದ್ದ ರಾಜಧಾನಿ ಪೊಲೀಸರಿಗೆ ಆಯುಕ್ತ ಬಿ.ದಯಾನಂದ್ ಶುಭ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿಯಲ್ಲಿ 2 ಸಾವಿರ ಮುಖಬೆಲೆಯ 10 ಕೋಟಿ ಮೌಲ್ಯದ ನೋಟುಗಳು ಪತ್ತೆ!

ಇನ್ನು ಮುಂದೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಒಂದು ದಿನ ರಜೆ ನೀಡುವ ನಿರ್ಧಾರಕ್ಕೆ ಆಯುಕ್ತರು ಬಂದಿದ್ದು, ಇದು ಬರುವ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಬೆಂಗಳೂರಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಜನ್ಮದಿನಕ್ಕೆಶುಭಾಶಯ ಪತ್ರ (ಗ್ರೀಟಿಂಗ್‌ ಕಾರ್ಡ್) ಜತೆ ಒಂದು ದಿನ ರಜೆ ನೀಡಲು ನಗರ ಪೊಲೀಸ್‌ ಆಯುಕ್ತ ದಯಾನಂದ್ ನಿರ್ಧರಿಸಿದ್ದಾರೆ.

ಈಗಾಗಲೇ ತಿಂಗಳವಾರು ಪೊಲೀಸರ ಜನ್ಮ ದಿನಾಚರಣೆ ಪಟ್ಟಿಯನ್ನು ಸಹ ಆಯುಕ್ತರ ಕಚೇರಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version