Site icon PowerTV

ಡಿ.ಕೆ ಶಿವಕುಮಾರ್ ಕೂಡ ಕಲ್ಲು ಬಂಡೆ ಇದ್ದಂಗೆ : ಶಿವಲಿಂಗೇಗೌಡ

ಹಾಸನ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಕಲ್ಲು ಬಂಡೆ ಇದ್ದಂಗೆ. ಅವರು ಇರಲಿ, ಅವರು ಹೋರಾಟ ಮಾಡಿದ್ದಾರೆ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಡಿ.ಎಂ ಕುರ್ಕೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಬಂಡೆ ಅಂತ ಸರ್ಕಾರ. ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿರುತ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಸಿದ್ದರಾಮಯ್ಯನವರಿಗೆ ಒಳ ಒಪ್ಪಂದ ಮಾಡಿಕೊಂಡು ಏನಾದ್ರೂ ಮಾಡಿಕೊಂಡರೆ ಅದು ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯನವರು ಈಗ ಸ್ಥಿರವಾಗಿರುವಂತಹ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.

ಟಚ್ ಕೂಡ ಮಾಡೋಕೆ ಆಗೊಲ್ಲ

ಸಿದ್ದರಾಮಯ್ಯ ನೇತೃತ್ವದಲ್ಲಿ ಇಲ್ಲಿ ಬಂಡೆಯಂತಹ ಸರ್ಕಾರ ಇದೆ. ಯಾರೂ ಅಲ್ಲಾಡಿಸೋಕೆ ಆಗೊಲ್ಲ, ಟಚ್ ಕೂಡ ಮಾಡೋಕೆ ಆಗೊಲ್ಲ. ಅವರ ಅವಧಿ ಇರೋವರೆಗೂ ಅವರನ್ನು ಟಚ್ ಮಾಡುವುದಕ್ಕೆ ಆಗುವುದಿಲ್ಲ. 5 ಉಚಿತ ಗ್ಯಾರಂಟಿ ಕೊಡೋದಕ್ಕೆ ಆಗೊಲ್ಲ‌ ಅಂತ ಹೇಳಿದ್ದೀರಿ. ಗ್ಯಾರಂಟಿ ಕೊಟ್ಟು, ಬಜೆಟ್‌ಅನ್ನು ಮಾಡಲಿಲ್ವಾ? ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.

Exit mobile version