Site icon PowerTV

ಜೆಸಿಬಿ ಬಳಸಿ ಎಟಿಎಂ ಯಂತ್ರ ಕಳವಿಗೆ ಯತ್ನ!

ಶಿವಮೊಗ್ಗ: ಜೆಸಿಬಿ ಬಳಸಿ ಎಟಿಎಂ ಯಂತ್ರ ಕಳ್ಳತನದ ವಿಫಲಯತ್ನವೂ ಶಿವಮೊಗ್ಗದ ವಿನೋಬನಗರ ಬಡಾವಣೆಯ ಮುಖ್ಯ ರಸ್ತೆ ಬಳಿ ನಡೆದಿದ್ದು ಈ ವೇಳೆ ಎಟಿಎಂ ಮೆಷಿನ್ ಹಾನಿಗೀಡಾಗಿದೆ.

ಇದನ್ನೂ ಓದಿ: ಕರ್ನಾಟಕ ಸೇರಲು ಮುಂದಾದ ಮಹಾರಾಷ್ಟ್ರದ ಶೇ.90ರಷ್ಟು ಮರಾಠಿ ಗ್ರಾಮಸ್ಥರು!

ಇಲ್ಲಿನ ನೂರು ಅಡಿ ರಸ್ತೆಯಲ್ಲಿರುವ ಶಿವಾಲಯ ಮುಂಭಾಗದ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ತಡರಾತ್ರಿ ಕಳ್ಳನೊಬ್ಬ ಜೆಸಿಬಿ ನುಗ್ಗಿಸಿ ದರೋಡೆಗೆ ಪ್ರಯತ್ನಿಸಿದ್ದಾನೆ, ಈ ವೇಳೆ ಎಟಿಎಂ ಕೇಂದ್ರದ ರೋಲಿಂಗ್ ಶಟರ್ ಮುರಿದು ಗಾಜಿನ ಬಾಗಿಲು ಹಾನಿಗೊಳಿಸಿದ್ದಾನೆ.

ಇದೇ ಸಂದರ್ಭದಲ್ಲಿ, ಗಸ್ತು ತಿರುಗುವ ಪೊಲೀಸ್ ನೋಡಿ ಆರೋಪಿ ಸ್ಥಳದಲ್ಲೇ ಜೆಸಿಬಿ ಬಿಟ್ಟು ಪರಾರಿಯಾಗಿದ್ದಾನೆ, ಸದ್ಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ  ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಾಗಿ ಶೋಧದಲ್ಲಿ ಮುಂದುವರೆಸಿದ್ದಾರೆ.

Exit mobile version