Site icon PowerTV

ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕಬ್ಬನ್ ಪೇಟೆಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಐಶ್ವರ್ಯ (24) ಎಂಬ ಮೃತ ಮಹಿಳೆಯಾಗಿದ್ದು, ಇವರು 2020ರಲ್ಲಿ ಮಂಜುನಾಥ ಎಂಬುವವರನ್ನು ವಿವಾಹವಾಗಿದ್ದರು. ಬಳಿಕ ದಂಪತಿಗಳು ಬೆಂಗಳೂರಿನ ಕಬ್ಬನ್ ಪೇಟೆಯ ಮನೆಯಲ್ಲಿ ವಾಸವಾಗಿದ್ದರು.

ಇದನ್ನು ಓದಿ : ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತನ್ವೀರ್ ಸೇಠ್ ಪ್ಲಾನ್ ಮಾಡಿದ್ರಾ? : ಛಲವಾದಿ ನಾರಾಯಣಸ್ವಾಮಿ

ಅದ್ಯಾಗೂ ವರದಕ್ಷಿಣೆ ವಿಷಯವಾಗಿ ಪ್ರತಿನಿತ್ಯ ಕಿರುಕುಳಕ್ಕೆ ಮನನೊಂದ ಐಶ್ವರ್ಯ ಎಂಬ ಮಹಿಳೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸದ್ಯ ಐಶ್ವರ್ಯನ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಘಟನೆ ಹಲಸೂರುಗೇಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version