Site icon PowerTV

ಕಾಂಗ್ರೆಸ್​ ಶಾಸಕರಿಗೆ ಗಾಳ ಹಾಕ್ತಿರುತ್ತಾರೆ : ಮತ್ತೊಂದು ಬಾಂಬ್ ಸಿಡಿಸಿದ ಡಿಕೆಶಿ

ಬೆಂಗಳೂರು : ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕ್ತಿರುತ್ತಾರೆ, ನಾನು ಜಾಸ್ತಿ ಪಬ್ಲಿಕ್ ಡಿಬೆಟ್ ಮಾಡಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಆಪರೇಷನ್ ಸಿಂಗಾಪುರ ಬಗ್ಗೆ ಬಾಂಬ್ ಸಿಡಿಸಿದರು.

ಕಾಂಗ್ರೆಸ್ ಶಾಸಕರ ಆಪರೇಷನ್ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷನಾಗಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಯಾರು? ಯಾರನ್ನು ಕರೆದಿದ್ರು? ಡಿಸೆಂಬರ್​ನಷ್ಟರಲ್ಲಿ ಮಾಯ ಮಂತ್ರ ಮಾಡ್ತೀವಿ ಎಂದು ಚಾಕಲೆಟ್ ಕೊಡ್ತಿರ್ತಾರೆ, ಸರ್ಕಾರ ಇಲ್ಲದಾಗಲೇ ಎಲ್ಲಾ ಗೊತ್ತಾಗ್ತಿತ್ತು. ಈಗ ಸರ್ಕಾರ ಇದೆ ಗೊತ್ತಾಗಲ್ವ? ನಮ್ಮ ಶಾಸಕರು ಎಲ್ಲಾ ಹೇಳ್ತಾರೆ. ಯಾರನ್ನು ಎಲ್ಲಿಗೆ ಕರೆದರೆಂದು ಹೇಳ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ಡಿ.ಕೆ ಶಿವಕುಮಾರ್ ಹೇಳಿರೋದು ನಿಜ ಇದೆ : ಬಿ.ಆರ್ ಪಾಟೀಲ್

ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದಾರೆ

ಸ್ವಪಕ್ಷದ ಶಾಸಕರ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಬಜೆಟ್ ಹೊಸ ಚಾಲೆಂಜ್. 5 ಉಚಿತ ಗ್ಯಾರಂಟಿಗಳ ಇಂಪ್ಲಿಮೆಂಟ್ ಆಗಬೇಕಿತ್ತು. ಅಧಿವೇಶನದಲ್ಲಿ ಶಾಸಕರಿಗೆ ಟೈಮೇ ಸಾಲಲಿಲ್ಲ. ಬಿಜೆಪಿ ಸದಸ್ಯರ ಪ್ರತಿಭಟನೆ, ನಮ್ಮ ಕೇಂದ್ರ ನಾಯಕರು ಬಂದಿದ್ರು. ಕೃಷ್ಣಪ್ಪ, ರಾಯರೆಡ್ಡಿ ಹಿರಿಯ ಶಾಸಕರು. ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಆಗಸ್ಟ್ 1ನೇ ತಾರೀಖಿನಿಂದ ಶಾಸಕರಿಗೆ ಸಮಯ ಫಿಕ್ಸ್ ಮಾಡ್ತೇವೆ ಎಂದರು.

ಯಾರಿಗೆ ಅನುದಾನ ನೀಡಲಿ? ಬಿಡಲಿ?

ಶಾಸಕರಿಗೆ ಅನುದಾನ ಬಿಡುಗಡೆ ವಿಚಾರ, ಎಲ್ಲಿದೆ ಅನುದಾನ? ನನ್ನ ಇಲಾಖೆಯಲ್ಲಿ ಅನುದಾನ ನೀಡಲು ಆಗ್ತಿಲ್ಲ. ಯಾರಿಗೆ ಅನುದಾನ ನೀಡಲಿ? ಯಾರಿಗೆ ಬಿಡಲಿ? ಬಿ.ಆರ್ ಪಾಟೀಲ್ ಆ ಥರ ಹೋಗುವ ಶಾಸಕರಲ್ಲ. ಸಂಜೆಯೊಳಗೆ ಎಲ್ಲಾ ಶಾಸಕರ ಜೊತೆಗೆ ಮಾತನಾಡ್ತೀನಿ. ಪೋಲೀಸ್ ಇಲಾಖೆಯಲ್ಲಿ ನಾನು ಹೇಳಿದಂತೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಡಿ.ಕೆ ಶಿವಕುಮಾರ್ ಅಸಹಾಯಕತೆ ತೋರಿದರು.

Exit mobile version