Site icon PowerTV

ಪಂಚಾಯತ್ ಸದಸ್ಯನಿಂದ ಮಾನಸಿಕ ಕಿರುಕುಳ ರಾಜೀನಾಮೆ ಕೊಟ್ಟ ಸಿಬ್ಬಂದಿ

ಉಡುಪಿ : ಪಂಚಾಯತ್ ಸದಸ್ಯನಿಂದ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದು, ಪಂಚಾಯತ್ ಹುದ್ದೆಗೆ ರಾಜೀನಾಮೆ ನೀಡಿದ ಸಿಬ್ಬಂದಿ ದಿನೇಶ್ ನಾಯ್ಕ್, ಕಾರ್ಕಳ ತಾಲೂಕಿನ ಕಲ್ಯಾದ ಗ್ರಾಮ ಪಂಚಾಯತ್ ನಲ್ಲಿ ಘಟನೆ.

ಕಳೆದ ಏಳು ವರ್ಷಗಳಿಂದ ಕಾರ್ಕಳ ತಾಲೂಕಿನ ಕಲ್ಯಾ ಪಂಚಾಯತ್ ನಲ್ಲಿ ಬಿಲ್ಲು ವಸೂಲಿಗಾರ ಹುದ್ದೆ ಮಾಡುತ್ತಿದ್ದ ದಿನೇಶ್ ನಾಯ್ಕ್ ಎಂಬುವವರು ಬಿಜೆಪಿ ಬೆಂಬಲಿತ ಸದಸ್ಯನಾದ ಸಂತೋಷ ಜಿ ಪುತ್ರನ್ ನಿಂದ ಮಾನಸಿಕ ಕಿರುಕುಳವನ್ನು ಅನುಭವಿಸುತ್ತಿದ್ದರು.

ಗ್ರಾಮಾ ಪಂಚಾಯತ್ ನ ಕುಂಟಾಡಿ ವಾರ್ಡ್​ನ ಸದಸ್ಯನಾದ ಸಂತೋಷ, ಪಂಚಾಯತ್ ಅಧಿಕೃತ ವಾಟ್ಸ್ ಅಫ್ ಗ್ರೂಪ್ ನಲ್ಲಿ ದಿನೇಶ್ ಅವರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಹಾಗೂ ಅವರ ಆಡಿಯೊ ಹರಿ ಬಿಟ್ಟು ಅವರಿಗೆ ಯಾವಗಲು ಮಾನಸಿಕವಾಗಿ ತೊಂದರೆಕೊಡುತ್ತಿದ್ದ ಸದಸ್ಯ.

ಇದನ್ನು ಓದಿ : ನೇಕಾರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ 

ಮನನೊಂದು ರಾಜೀನಾಮೆ ನೀಡಿದ ದಿನೇಶ್.

ದಿನೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅಲ್ಲದೆ,ಜೀವ ಬೆದರಿಕೆ ಹಾಗೂ ದಂಮ್ಕಿ ನೀಡಿ ಹೆದರಿಸುತ್ತಿದ್ದ ಸದಸ್ಯ ಸಂತೋಷ ಜಿ ಪುತ್ರನ್. ಅದರಿಂದ ಮನನೊಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಸಿಬ್ಬಂದಿ ದಿನೇಶ್ ಪಂಚಾಯತ್ ಬಿಲ್ಲು ವಸೂಲಿಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Exit mobile version