Site icon PowerTV

‘ಪವರ್’ ಟಿವಿ ಕಚೇರಿಗೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಭೇಟಿ

ಬೆಂಗಳೂರು : ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಬೆಂಗಳೂರಿನ ಪವರ್ ಟಿವಿ ಕಚೇರಿಗೆ ಆಗಮಿಸಿದರು.

ಪವರ್ ಟಿವಿ ಮುಖ್ಯಸ್ಥರಾದ ರಾಕೇಶ್‌ ಶೆಟ್ಟಿ ಅವರನ್ನು ಆಶೀರ್ವದಿಸಿದರು. ಜೊತೆಗೆ ಪವರ್ ಟಿವಿಯ ಸಂಪಾದಕರು ಮತ್ತು ಸಿಬ್ಬಂದಿ ವರ್ಗದವರಿಗೂ ಆಶೀರ್ವದಿಸಿದರು.

ಇದನ್ನೂ ಓದಿ  : ಕಳಚಿತು ‘ಡೀಲ್ ಮಾಸ್ಟರ್’ನ ಅಸಲಿ ಮುಖವಾಡ : ‘ಪವರ್ ಸ್ಟಿಂಗ್’ಗೆ ಕರುನಾಡು ಸಲಾಂ..!

ಸುಗುಣೇಂದ್ರ ಶ್ರೀಗಳ ಪರ್ಯಾಯದ ಅಂಗವಾಗಿ ಪುತ್ತಿಗೆ ಮಠದ ವತಿಯಿಂದ ಈ ಬಾರಿ ಭಗವದ್ದೀತೆಯ ಕೋಟಿ ಲೇಖನ ಯಜ್ಞ ಅಭಿಯಾನ ಹಮ್ಮಿಕೊಂಡಿದೆ. ಕೃಷ್ಣ ಭಕ್ತರಿಂದ ಕೋಟಿ ಲೇಖನ ಬರೆಸುವ ಅಭಿಯಾನಕ್ಕೆ ಸ್ವತಃ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರೇ ಚಾಲನೆ ನೀಡಿದ್ದು, ಪವರ್ ಟಿವಿ ಸಿಬ್ಬಂದಿಗೆ ಪುಸ್ತಕ ನೀಡಿದರು.

ಕೋಟಿ ಲೇಖನ ಯಜ್ಞಕ್ಕೆ ಚಾಲನೆ

ಭಗವದ್ಗೀತೆಯ ಶ್ಲೋಕಗಳನ್ನು ಬರೆಯುವುದರಿಂದ ಕೃಷ್ಣ ಭಕ್ತರ ಕೋರಿಕೆಗಳು, ಅಭಿಷ್ಠೆಗಳು ಈಡೇರುತ್ತವೆ ಅನ್ನೋ ನಂಬಿಕೆ. ಹೀಗಾಗಿ, ಸುಗುಣೇಂದ್ರತೀರ್ಥರ ಶ್ರೀಪಾದರ 4ನೇ ಪರ್ಯಾಯದ ಅಂಗವಾಗಿ ಕೋಟಿ ಲೇಖನ ಯಜ್ಞ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಭಗವಂತ ಶ್ರೀಕೃಷ್ಣ ವ್ಯಕ್ತಿಯ ಪರ ಅಲ್ಲ. ತತ್ವದ ಪರ ಮತ್ತು ಸಜ್ಜನರ ಪಕ್ಷಪಾತಿ. ಹೀಗಾಗಿ, ಭಗವದ್ಗೀತೆ ಯಾವುದೇ ಮತೀಯ ಗ್ರಂಥವಲ್ಲ. ಸನ್ಮತಿ ನೀಡುವ ಗ್ರಂಥ ಎಂದು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

Exit mobile version