Site icon PowerTV

ಸಂವಿಧಾನ ತಜ್ಞನಿಗೆ ಕನಿಷ್ಠ ಜ್ಞಾನವೂ ಇಲ್ಲ : ಬಿಜೆಪಿ ಲೇವಡಿ

ಬೆಂಗಳೂರು : ಸಂವಿಧಾನ ತಜ್ಞ ಸಿಎಂ ಸಿದ್ದರಾಮಯ್ಯ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರವು ಸರ್ಕಾರಿ ಆಡಳಿತ ಯಂತ್ರಗಳ ಸಂಪೂರ್ಣ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದೆ.

ಮಾತೆತ್ತಿದರೆ ‘ನಾನೊಬ್ಬ ಸಂವಿಧಾನ ತಜ್ಞ’ ಎಂದು ಸಿದ್ದರಾಮಯ್ಯ ಬೀಗುತ್ತಾರೆ. ಆದರೆ, ಸಿದ್ದರಾಮಯ್ಯರವರಿಗೆ ಸರ್ಕಾರಿ ವ್ಯವಸ್ಥೆಯನ್ನು ಖಾಸಗಿ ಉದ್ದೇಶಕ್ಕೆ ಬಳಸಿಕೊಳ್ಳಬಾರದೆಂಬ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ ಎಂದು ಛೇಡಿಸಿದೆ.

ಸರ್ಕಾರಿ ಯಂತ್ರವನ್ನು ಖಾಸಗಿ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುವುದನ್ನು ಸಿಎಂ ಸಿದ್ದರಾಮಯ್ಯ ಅವರು ಮುಂದುವರೆಸಿದ್ದಾರೆ. ಮೊನ್ನೆ ರಾಜ್ಯದ ಹಿರಿಯ ಐ.ಎ.ಎಸ್ ಅಧಿಕಾರಿಗಳನ್ನು ತಮ್ಮ ರಾಜಕೀಯ ಕೆಲಸಕ್ಕಾಗಿ ನೇಮಿಸಿಕೊಂಡಿದ್ದರು. ಇಂದು ಸರ್ಕಾರಿ ಜಾಲತಾಣಗಳನ್ನು ತಮ್ಮ ಪಕ್ಷ ಹಾಗೂ ವೈಯಕ್ತಿಕ ಹಿತಾಸಕ್ತಿಗಳನ್ನು ಬಿಂಬಿಸಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಟುಕಿದೆ.

ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಶಾಸಕರುಗಳೇ ವರ್ಗಾವಣೆ ದಂಧೆ ಹಾಗೂ ಕಾಂಗ್ರೆಸ್ ಸಚಿವರ ದುರ್ವರ್ತನೆ ವಿರುದ್ಧ ಪತ್ರ ಬರೆದಿರುವುದು ಇದೀಗ ಅದು ಋಜುವಾತಾಗಿದೆ. ಪತ್ರದಲ್ಲಿ ಮೂರನೇ ವ್ಯಕ್ತಿ ಎಂದು ಪ್ರಸ್ತಾಪಿಸಿರುವುದು ಶ್ಯಾಡೋ ಸಿಎಂರವರ ಬಗ್ಗೆಯೇ? ಎಂದು ಕಾಲೆಳೆದಿದೆ.

Exit mobile version