Site icon PowerTV

ಈ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತೆ : ಎಂ.ಬಿ ಪಾಟೀಲ್

ವಿಜಯಪುರ : ಈ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತದೆ. ಸರ್ಕಾರ ಕೆಡುವುದು ಹಗಲು ಕನಸು ಎಂದು ವಿಪಕ್ಷಗಳಿಗೆ ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟರು.

ಸರ್ಕಾರ ಬೀಳಿಸಲು ಯತ್ನ ನಡೆದಿದೆಯೇ ಎನ್ನುವ ವಿಚಾರ ಕುರಿತು ವಿಜಯಪುರ ತಾಲೂಕಿನ‌ ಕನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅದು ಹಾಗೆಲ್ಲ ಆಗೋದಿಲ್ಲ, ನಾವು 136 ಶಾಸಕರು ಒಟ್ಟಿಗೆ ಇದ್ದೇವೆ. ಈ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತೆ. ಒಬ್ಬರೇ ಒಬ್ಬರು ಶಾಸಕರು ಕೂಡ ಹೋಗಲ್ಲ. ಇದು ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲ. ಈ ಸರ್ಕಾರ ಸಂಪೂರ್ಣ 5 ವರ್ಷ ಇರುತ್ತದೆ. ಮತ್ತೆ 5 ವರ್ಷದ ಬಳಿಕ ಅಧಿಕಾರಕ್ಕೆ ಬರುತ್ತೇವೆ ಎಂದು ಎಂ.ಬಿ‌ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : HDDಗೆ ವಯಸ್ಸಾಯ್ತು, ಅವ್ರು ಓಡಾಡೋಕೆ ಆಗಲ್ಲ ಅಂದುಕೊಂಡವ್ರೆ : ದೇವೇಗೌಡ

ಕಾಂಗ್ರೆಸ್​ನ ಸ್ವ ಪಕ್ಷೀಯ ಶಾಸಕರು ಅಸಮಾಧಾನಗೊಂಡು ಸಿಎಂಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಮಾಧಾನ ಎಂಬುದು ಸಹಜ. ಅವರದ್ದು ಏನೇ ಇದ್ದರೂ ಸಿಎಲ್​ಪಿ ಸಭೆಯಲ್ಲಿ ಚರ್ಚಿಸಲಾಗುವುದು. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಜಾಣ್ಮೆಯ ಉತ್ತರ ನೀಡಿದರು.

ಶಾಸಕರ ಮೇಲೆ ಸಹ ಸಾಕಷ್ಟು ಒತ್ತಡಗಳಿರುತ್ತವೆ. ತಮ್ಮ ಮತಕ್ಷೇತ್ರದ ಅನುದಾನ ವಿಚಾರವಾಗಿ ಸಹಿತ ಒತ್ತಡಗಳಿರುತ್ತವೆ‌. ಇದೇನು ದೊಡ್ಡ ವಿಚಾರ ಅಲ್ಲ. ಮುಖ್ಯಮಂತ್ರಿ ‌ಅವರೊಂದಿಗೆ ಮಾತನಾಡಿ ಪರಿಹರಿಸುತ್ತಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

Exit mobile version