Site icon PowerTV

ಬಿಜೆಪಿಯವರು ನಕಲಿ ಪತ್ರ ವೈರಲ್ ಮಾಡಿದ್ದಾರೆ : ಬಿ.ಆರ್ ಪಾಟೀಲ್ ಯೂಟರ್ನ್

ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಅಂತ ಹೇಳಲಾಗುತ್ತಿರೋ ಪತ್ರ ನಕಲಿ. ಯಾರೋ ನನ್ನ ನಕಲಿ ಲೆಟರ್ ಹೆಡ್ ಅನ್ನು ಬಳಸಿ ಪತ್ರ ವೈರಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಉಲ್ಟಾ ಹೊಡೆದಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಈ ರೀತಿ ಮಾಡಿರಬಹುದು ಎಂಬ ಸಂಶಯವಿದೆ. ಈ ಬಗ್ಗೆ ಎಸ್ಪಿ ಅವರಿಗೆ ದೂರು ನೀಡ್ತೇನೆ ಎಂದು ಬಿಜೆಪಿ ಕಡೆ ಬಾಣ ಬಿಟ್ಟಿದ್ದಾರೆ.

ನನ್ನ ಲೆಟರ್ ಹೆಡ್‌ನಲ್ಲಿ ಸೀರಿಯಲ್ ನಂಬರ್ ಇದೆ. ನಾನು ಈ ಹಿಂದೆ ಶಾಸಕನಾಗಿದ್ದಾಗ ಇದ್ದಿದ್ದ ಲೆಟರ್ ಪ್ಯಾಡ್‌ನ ಪ್ರತಿಯದು. ಅದರಲ್ಲಿ ಶಾಂತಿನಗರ ಮನೆ ವಿಳಾಸವಿದೆ. ಹೊಸ ಲೆಟರ್ ಹೆಡ್‌ನಲ್ಲಿ ಅಕ್ಕ ಮಹಾದೇವಿ ಕಾಲೋನಿ ನಿವಾಸದ ಅಡ್ರೆಸ್ ಇದೆ. ನನ್ನ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಬೇದ ಮೂಡಿಸಲು ಈ ಪತ್ರ ಸೃಷ್ಟಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಶಾಸಕರ ಕೆಲಸ ಆಗಿಲ್ಲ ಅಂತ ಕೇಳೋದು ಕರೆಕ್ಟ್ : ಕೆ.ಎಚ್. ಮುನಿಯಪ್ಪ

ಹರಿಪ್ರಸಾದ್ ಶಿಸ್ತಿನ ಸಿಪಾಯಿ ಇದ್ದಾರೆ

ಕೆಲ ಶಾಸಕರು ಸಿಎಂಗೆ ಪತ್ರ ವಿಚಾರವಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ, ಅದು ಶುದ್ದ ಸುಳ್ಳು. ಬಿ.ಆರ್ ಪಾಟೀಲ್ ಹಾಗೂ ಬಸವರಾಜ ರಾಯರೆಡ್ಡಿ ನನ್ನ ಆತ್ಮೀಯ ಸ್ನೇಹಿತರು. ಅವರಿಗೆ ಅಸಮಾಧಾನ ಇದ್ದರೆ ಮೊದಲು ನನಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಬಿ.ಕೆ ಹರಿಪ್ರಸಾದ್ ಅವರು ಸಮಾಜದ ಸಭೆಯಲ್ಲಿ ಮಾತನಾಡಿದ್ದಾರೆ. ನಮ್ಮೆಲ್ಲರಿಗಿಂತ ಹರಿಪ್ರಸಾದ್ ಶಿಸ್ತಿನ ಸಿಪಾಯಿ ಇದ್ದಾರೆ. ಸರ್ಕಾರ ಕೆಡವಲು ಸಿಂಗಾಪುರದಲ್ಲಿ ಪ್ಲ್ಯಾನ್ ಮಾಡ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ, ಅದನ್ನು ನಾನು ಒಪ್ಪೋದಿಲ್ಲ. ಅಲ್ಲಗಳೆಯೋದು ಇಲ್ಲ ಎಂದು ತಿಳಿಸಿದ್ದಾರೆ.

Exit mobile version