Site icon PowerTV

ಜೆಡಿಎಸ್-ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಬರ್ತಾರೆ : ಬಾಂಬ್ ಸಿಡಿಸಿದ ಶಿವರಾಜ್ ತಂಗಡಗಿ

ಕೊಪ್ಪಳ : ಮುಂದೆ ಜೆಡಿಎಸ್​ನಲ್ಲಿ, ಬಿಜೆಪಿಯಲ್ಲಿ ಯಾವ ಶಾಸಕರು ಇರಲ್ಲ. ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಬರ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ಬಾಂಬ್ ಸಿಡಿಸಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ 10ರಿಂದ 15 ವರ್ಷ ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಚಾಟಿ ಬೀಸಿದರು.

ಸರ್ಕಾರ ಕೆಡವಲು ತಂತ್ರ ರೂಪಿಸಲಾಗುತ್ತಿದೆ ಎಂಬ ಡಿಸಿಎಂ ಡಿಕೆಶಿ ಆರೋಪದ ಬಗ್ಗೆ ಮಾತನಾಡಿದ ಅವರು, ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಅಂತಹ ಭೀತಿಯೂ ಇಲ್ಲ. ಅಂತಹ ಪರಿಸ್ಥಿತಿಯೂ ಬರುವುದಿಲ್ಲ. ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಕುಟುಕಿದರು. 

ಇದನ್ನೂ ಓದಿ : ಕಾಂಗ್ರೆಸ್​ ಶಾಸಕರಿಗೆ ಗಾಳ ಹಾಕ್ತಿರುತ್ತಾರೆ : ಮತ್ತೊಂದು ಬಾಂಬ್ ಸಿಡಿಸಿದ ಡಿಕೆಶಿ

ಕೆಲಸ ಮಾಡಿಕೊಟ್ಟ ತೃಪ್ತಿ ನನಗಿದೆ

ಸ್ವಪಕ್ಷದ ಶಾಸಕರು ಅಸಮಾಧಾನಗೊಂಡು ಸಚಿವರ ವಿರುದ್ದ ಸಿಎಂಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ಪತ್ರ ಬರೆದ ವಿಚಾರ ನನಗೆ ಮಾಹಿತಿ ಇಲ್ಲ. ಶಾಸಕರ ಕೆಲಸವನ್ನು ಸಚಿವರು ಮಾಡಲೇಬೇಕು. ಮುಖ್ಯಮಂತ್ರಿಗಳು ಏನು ಸೂಚನೆ ಕೊಡುತ್ತಾರೋ ಆ ಕೆಲಸ ಮಾಡಬೇಕು ಎಂದರು.

ನನ್ನ ಇಲಾಖೆಯ ಎಲ್ಲಾ ಕೆಲಸಗಳನ್ನು ಮಾಡಿ ಕೊಡುತ್ತಿದ್ದೇನೆ. ನನ್ನ ಹತ್ತಿರ ಬಂದಿರುವ ಎಲ್ಲಾ ಶಾಸಕರ ಕೆಲಸ ಮಾಡಿದ್ದೇನೆ. ಎಲ್ಲರಿಗೂ ಕೆಲಸ ಮಾಡಿಕೊಟ್ಟ ತೃಪ್ತಿ ನನಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

Exit mobile version