Site icon PowerTV

ಮನೆ ಗೋಡೆ ಕುಸಿದು ಒಂದು ವರ್ಷದ ಮಗು ಸಾವು

ದಾವಣಗೆರೆ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆ ಕುಸಿದು ಒಂದು ವರ್ಷ ಐದು ತಿಂಗಳ ಮಗು ಸಾವನ್ನಪ್ಪಿದೆ, ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಘಟನೆ ನೆಡೆದಿದೆ.

ಕೆಲದಿನಗಳಿಂದ ಸುರಿಯುತ್ತಿರುವ ವರುಣಾನ ಅಬ್ಬರಕ್ಕೆ ರಾಜ್ಯದಲ್ಲಿ ಕೆಲ ಸಾವು,ನೋವುಗಳು ಹಾಗೂ ಅನಾಹುತಗಳು ಸೃಷ್ಟಿಯಾಗಿವೆ. ಅದರ ಬೆನ್ನಲ್ಲೇ ಕುಂಬಳೂರು ಗ್ರಾಮದಲ್ಲಿ ಇಂದು ಮುಂಜಾನೆ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದಿದ್ದು, ಒಂದು ವರ್ಷ ಐದು ತಿಂಗಳು ತುಂಬಿದ್ದ ಹೆಣ್ಣು ಮಗು ಒಂದು ಸಾವನ್ನಪ್ಪಿದೆ.

ಇದನ್ನು ಓದಿ : ರೈತರ ಬೆಂಬಲಕ್ಕಾಗಿ ಹಾಲಿನ ದರ ಹೆಚ್ಚಳ ಅನಿವಾರ್ಯ : ಭೀಮಾನಾಯ್ಕ್

5 ಲಕ್ಷ ಪರಿಹಾರ ಕೊಟ್ಟ ಶಿವಾನಂದ ಕಾಪಶಿ.

ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ, ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ನೀಡಿ, 5 ಲಕ್ಷ ಪರಿಹಾರ ವಿತರಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ.

Exit mobile version