Site icon PowerTV

ಸಿದ್ದರಾಮಯ್ಯ ಸರ್ಕಾರ ಉರುಳೋದು ಇಲ್ಲ, ಹೋಗೋದು ಇಲ್ಲ : ಸಚಿವ ವೆಂಕಟೇಶ್

ಚಾಮರಾಜನಗರ : ಸಿದ್ದರಾಮಯ್ಯ ಸರ್ಕಾರ ಉರುಳೋದು ಇಲ್ಲ, ಹೋಗೋದು ಇಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್ ಹೇಳಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸೋದು, ಏಳಿಸೋದು ಅಷ್ಟು ಸುಲಭವಲ್ಲ ಎಂದು ಬಿ.ಕೆ ಹರಿಪ್ರಸಾದ್‌ ಹೇಳಿಕೆಗೆ ವೆಂಕಟೇಶ್ ತಿರುಗೇಟು ಕೊಟ್ಟರು.

ಬಿ.ಕೆ ಹರಿಪ್ರಸಾದ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸರ್ಕಾರ ಬೀಳಿಸೋಕೆ ಸಿಂಗಪೂರ್ ‌ನಲ್ಲಿ ಮೀಟಿಂಗ್ ಎಂಬ ಡಿಕೇಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಡಿ.ಕೆ ಶಿವಕುಮಾರ್ ಅವರನ್ನೇ ಕೇಳಬೇಕು. ಆ ಬಗ್ಗೆ ನನಗೇನು ಗೊತ್ತಿಲ್ಲ ಎಂದು ತಿಳಿಸಿದರು.

ಡಿಕೆಶಿ ಸ್ಪಷ್ಟನೆ ಏನು?

ಸಿಂಗಾಪುರದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ ಎಂಬ ತಮ್ಮ ಹೇಳಿಕೆಗೆ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹೋಗುವವರೆಲ್ಲರೂ ಹೋಗಿ ಅಲ್ಲೇ ಚರ್ಚೆ ಮಾಡಲಿ. ಪಕ್ಷದಲ್ಲಿ ಇರುವವರೆಲ್ಲಾ ಇಲ್ಲೇ ಚರ್ಚೆ ಮಾಡಲಿ. ಎಲ್ಲೆಲ್ಲಿ? ಏನೇನಾಗುತ್ತಿದೆ? ಅಂತ ನಮಗೆ ಮಾಹಿತಿ ಇದೆ. ಎಲ್ಲವೂ ಚರ್ಚೆ ಆಗಬೇಕಲ್ವಾ? ಎಂದು ಹೇಳಿದ್ದಾರೆ.

Exit mobile version