Site icon PowerTV

ಕೊನೆಯ ದಿನವೂ ಪವರ್ ‘ಫರ್ನಿಚರ್ ಎಕ್ಸ್ ಪೋ’ಗೆ ಭರ್ಜರಿ ರೆಸ್ಪಾನ್ಸ್!

ಬೆಂಗಳೂರು : ಪವರ್ ಟಿವಿ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ‘ಫರ್ನಿಚರ್ ಎಕ್ಸ್ ಪೋ’ಗೆ ಇಂದು ಕೊನೆ ದಿನ. ಕಳೆದ ಮೂರು ದಿನಗಳಿಂದ ಇಲ್ಲಿಯವರೆಗೂ ‘ಫರ್ನಿಚರ್ ಎಕ್ಸ್ ಪೋ’ಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಲಭ್ಯವಾಗಿದೆ.

ಒಂದು ಕಡೆ ಫುಲ್ ಭರ್ಜರಿಯಾಗಿ ಕಣೋ ಸೋಫಾಗಳು, ಮತ್ತೊಂದು ಕಡೆ ಐಷಾರಾಮಿ ಪೀಠೋಪಕರಣಗಳು, ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡೋ ಡೈನಿಂಗ್ ಟೇಬಲ್. ಹೀಗೆ ನೂರಾರು ಬಗೆಯ ವುಡ್ ವರ್ಕ್ ಒಂದೆಡೆಯಾದ್ರೆ, ಮತ್ತೊಂದು ಕಡೆ ಹೋಮ್ ಡೆಕೋರ್, ಕಾರ್ಪೆಟ್, ವಾಲ್ ಪೇಪರ್ ದಿನ ಬಳಕೆ ವಸ್ತುಗಳು ಮತ್ತೊಂದು ಕಡೆ.

ಪವರ್ ಟಿವಿ ‘ಫರ್ನಿಚರ್ ಎಕ್ಸ್ ಪೋ’ ಫರ್ನಿಚರ್ ಎಕ್ಸ್ಪೋವನ್ನು ಆಯೋಜನೆ ಮಾಡಿದ್ದು, ಸದ್ಯ ಈ ಎಕ್ಸ್ ಪೋ  ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 5 ಕಿಂಗ್ಸ್ ಕೋರ್ಟ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಇಂದು ಎಕ್ಸ್ ಪೋ ಗೆ ಕೊನೆ ದಿನ ಆಗಿದ್ರಿಂದ ಸಾಕಷ್ಟು ಜನ ಎಕ್ಸ್ ಪೋ ಗೆ ಭೇಟಿ ನೀಡಿದ್ದರು.

ಇದನ್ನೂ ಓದಿ : ಪವರ್ ‘ಫರ್ನಿಚರ್ ಎಕ್ಸ್ ಪೋ’ಗೆ ಶಾಸಕ ಮುನಿರತ್ನ ಚಾಲನೆ

40% ರಿಂದ 70% ಆಫರ್

ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರು. ತಮ್ಮ ಮನೆಗೆ ಹೊಂದಾಣಿಕೆಯಾಗುವಂತಹ ಪೀಠೋಪಕರಣಗಳು ಸೇರಿ ಹಲವು ವಸ್ತುಗಳನ್ನು ಬುಕ್ ಮಾಡಿಕೊಂಡ್ರು. ಕೆಲವು ಸ್ಟಾಲ್ ಗಳಲ್ಲಿ 40% ಆಫರ್ ಇದ್ರೆ, ಇನ್ನೂ ಕೆಲವು ಕಡೆ  70% ಇತ್ತು. ಹೀಗಾಗಿ, ಜನ ಈ ಸುವರ್ಣವಕಾಶವನ್ನು ಮಿಸ್ ಮಾಡಿಕೊಳ್ಳದೆ ಫರ್ನಿಚರ್ ಗಳನ್ನ ಬುಕ್ ಮಾಡಿದ್ರು.

15 ಲಕ್ಷದವರೆಗಿನ ವಸ್ತುಗಳು

ಇನ್ನೂ ಈ ಎಕ್ಸ್ಪೋದಲ್ಲಿ 5 ಸಾವಿರದಿಂದ 15 ಲಕ್ಷದವರೆಗಿನ ವಸ್ತುಗಳು ಸಿಗುತ್ತಿದ್ದವು. ಮಲೇಷಿಯಾ, ಸಿಂಗಾಪುರ, ದುಬೈ ಕಡೆಗೆ ಎಕ್ಸ್ಪೋರ್ಟ್ ಆಗುವಂತಹ ವಸ್ತುಗಳನ್ನು ಕೂಡ ಎಕ್ಸ್ ಪೋದಲ್ಲಿ ಮಾರಾಟ ಮಾಡಲಾಗುತ್ತಿತ್ತು. ವೆರೈಟಿ ವುಡ್ ನ ಆಯ್ಕೆಗಳು ಇಲ್ಲಿದ್ದು, ಜನ ತಮ್ಮಿಷ್ಟದ ವಸ್ತುಗಳನ್ನು ಖರೀದಿಸಿ ಎಂಜಾಯ್ ಮಾಡಿದ್ರು.

Exit mobile version