Site icon PowerTV

ವರ್ಷಾಂತ್ಯಕ್ಕೆ ಬೆಂಗಳೂರಲ್ಲಿ ತಲೆ ಎತ್ತಲಿದೆ ದೊಡ್ಡ ಮೆಟ್ರೋ ನಿಲ್ದಾಣ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರ್ಷಾಂತ್ಯಕ್ಕೆ ದೊಡ್ಡ ಮೆಟ್ರೋ ನಿಲ್ದಾಣ ಲೋಕಾರ್ಪಣೆಯಾಗಲಿದೆ. 2025ರ ಮಾರ್ಚ್ ವೇಳೆಗೆ ಪಿಂಕ್ ಲೈನ್ ತೆರೆಯುವ ನಿರೀಕ್ಷೆಯಿದೆ.

ಅತಿ ದೊಡ್ಡ ಮೆಟ್ರೋ ನಿಲ್ದಾಣವಾದ ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‍ನಲ್ಲಿರುವ ಮಲ್ಟಿ-ಲೆವೆಲ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವನ್ನು 2023 ರ ಅಂತ್ಯದ ವೇಳೆಗೆ ಭಾಗಶಃ ತೆರೆಯಲು ನಿರ್ಧರಿಸಲಾಗಿದೆ.

ಆರ್.ವಿ (RV) ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಪಿಂಕ್ ಲೈನ್‍ನ ಭಾಗವಾಗಿರುವ ನಿಲ್ದಾಣವು ಪೀಕ್ ಅವರ್‍ನಲ್ಲಿ 25,000 ಪ್ರಯಾಣಿಕರನ್ನು ನಿಭಾಯಿಸುತ್ತದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ ಅಧಿಕಾರಿಗಳು ಹೇಳುವಂತೆ ನಿಲ್ದಾಣದ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಇದನ್ನೂ ಓದಿ : ಫ್ರೀ ಪ್ರಯಾಣಕ್ಕೆ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್

2025ರ ಮಾರ್ಚ್ ವೇಳೆಗೆ ಪಿಂಕ್ ಲೈನ್

ಮಲ್ಟಿ-ಲೆವೆಲ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣದ ಒಟ್ಟು ನಿರ್ಮಿತ ಪ್ರದೇಶವು 19,826 ಚದರ ಮೀಟರ್. ಹಲವು ಗಡುವುಗಳನ್ನು ಕಳೆದುಕೊಂಡ ನಂತರ, BMRCL ಹಳದಿ ರೇಖೆಯನ್ನು ತೆರೆಯುವ ಗುರಿಯನ್ನು 2023 ಎಂದು ನಿಗದಿಪಡಿಸಿದೆ. ಮಾರ್ಚ್ 2025ರ ವೇಳೆಗೆ ಪಿಂಕ್ ಲೈನ್ ತೆರೆಯುವ ನಿರೀಕ್ಷೆಯಿದೆ.

BMRCL ಎಂಡಿ ಅಂಜುಮ್ ಪರ್ವೇಜ್ ಮಾತನಾಡಿ, ಜಯದೇವ ಮೆಟ್ರೋ ನಿಲ್ದಾಣವು ನಮ್ಮ ಮೆಟ್ರೋದ ಎರಡನೇ ಹಂತದ ಅಡಿಯಲ್ಲಿ ಪ್ರಸ್ತಾಪಿಸಲಾದ ಎರಡು ಹೊಸ ಮಾರ್ಗಗಳ ಭಾಗವಾಗಿದೆ. ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಒಂದು ಮಾರ್ಗವನ್ನು ವರ್ಷಾಂತ್ಯದೊಳಗೆ ತೆರೆಯಲಾಗುವುದು ಎಂದಿದ್ದಾರೆ.

Exit mobile version