Site icon PowerTV

ಮಳೆ ಹಾನಿ, ಸರ್ಕಾರದಿಂದ 50 ಸಾವಿರ ಪರಿಹಾರ : ಈಶ್ವರ ಖಂಡ್ರೆ ಭರವಸೆ

ಬೀದರ್ : ಗಡಿ ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ನಿರಂತರ ಮಳೆ ಆಗ್ತಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಅತೀವ ಮಳೆಯಿಂದಾಗಿ ಈಗಾಗಲೇ ಕೆಲವೆಡೆ ಬೆಳೆ ಹಾನಿ ಆಗಿದ್ದು, ಇನ್ನು ಕೆಲವೆಡೆ ಮನೆ ಕುಸಿತವಾಗಿದೆ. 

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭಾಲ್ಕಿ ತಾಲೂಕಿನ ಹುಪಳಾ ಗ್ರಾಮದಲ್ಲಿ ಮಳೆ ಹಾನಿಗೊಳಗಾದ ಪ್ರದೇಶ ವೀಕ್ಷಣೆ ಮಾಡಿದರು. ಮನೆ ಕುಸಿತವಾಗಿದ್ದ ಧನರಾಜ ರಾಮಚಂದ್ರ ಸಾನೆ ಅವರ ಮನೆ ವೀಕ್ಷಣೆ ಮಾಡಿ, ವೈಯಕ್ತಿಕವಾಗಿ 10 ಸಾವಿರ ನೀಡಿದರು. ಸರ್ಕಾರದಿಂದ 50 ಸಾವಿರ ಪರಿಹಾರ ನೀಡಲಾಗುವುದು ಭರವಸೆ ನೀಡಿದರು.

ಶೇ.20ರಷ್ಟು ಹೆಚ್ಚಿನ ಮಳೆ

ಬೀದರ ಜಿಲ್ಲೆಯಲ್ಲಿ ಕಳೆದ ವಾರ ಶೇ.20ರಷ್ಟು ಹೆಚ್ಚಿನ ಮಳೆ ಸುರಿದ ಕಾರಣ ಹಲವು ಕಡೆ ಮನೆ ಕುಸಿತವಾಗಿದೆ. ಸಂತ್ರಸ್ತರಿಗೆ ಅಗತ್ಯ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳೆ ಹಾನಿ ಮತ್ತು ಮನೆ ಕುಸಿತ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಇದನ್ನೂ ಓದಿ : ಜಲಾವೃತಗೊಂಡ ರಸ್ತೆ : ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳ ಆಗ್ರಹ

ವೈದ್ಯರು, ಸಿಬ್ಬಂದಿಗಳಿಗೆ ತರಾಟೆ

ಬಳಿಕ‌ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ವೈದ್ಯರು ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಅಸ್ಪತ್ರೆಯಲ್ಲಿ ಸ್ವಚ್ಚತೆ ಅನ್ನೋದು ಸಂಪೂರ್ಣ ಮರಿಚಿಕೆ ಆಗಿದ್ದು, ಅವ್ಯವಸ್ಥೆಯ ಆಗರವಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಬೇಕು ಹಾಗು ಸೊರುತ್ತಿರುವ ಮೇಲ್ಚಾವಣಿಯನ್ನ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Exit mobile version