Site icon PowerTV

ಹಾವೇರಿ ಜಿಲ್ಲೆಯಾದ್ಯಂತ ವರುಣನ ಅರ್ಭಟ, ಮುಳುಗಡೆಯಾದ ವರದ ಸೇತುವೆ

ಹಾವೇರಿ : ಹಾವೇರಿ ಜಿಲ್ಲೆಯಾದ್ಯಂತ ವರಣುನ ಆರ್ಭಟ ಜೋರಾಗಿದ್ದು ಹಾವೇರಿಯಿಂದ ಕಳಸೂರು ಸಂಪರ್ಕಿಸುವ ವರದ ಸೇತುವೆ ಮುಳುಗಡೆಯಾಗಿ ಹೋಗಿದೆ.

ಕಳೆದವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಕಂಗಾಲಾಗಿರುವ ಹಾವೇರಿ ಜನರು ಮಳೆ ಬೀಡುವಿಗಾಗಿ ಎದುರು ನೋಡುತ್ತಿದ್ದು, ಇಂದು ಬೆಳಗಿನಿಂದ ಮತ್ತೆ ಅಬ್ಬರಿಸುತ್ತಿರುವ ವರುಣನ ಅರ್ಭಟಕ್ಕೆ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಅರ್ಜಿಸಲ್ಲಿಕೆಗೆ ಹಣ ಪಡೆದ ಆರೋಪ : ಗ್ರಾಮ ಒನ್​ ಕೇಂದ್ರದ ಲಾಗಿನ್​ ಐಡಿ ರದ್ದಿಗೆ ಸಚಿವರ ಆದೇಶ !

ಜನರನ್ನು ಹೊರಗೆ ಬಿಡದಂತೆ ಸುರಿಯುತ್ತಿರುವ ಮಳೆ.

ಅದರ ಬೆನ್ನೇಲೆ ಕಳೆದವಾರದಿಂದ ಸುರಿಯುತ್ತಿರುವ ಮಳೆಗೆ ವರದಿ ನದಿ ತುಂಬಿ ಹರಿದ ಪರಿಣಾಮವಾಗಿ ಹಾವೇರಿಯಿಂದ ಕಳಸೂರು ಸಂಪರ್ಕಿಸುವ ಸೇತುವೆಯು ಮುಳುಗಡೆಯಾಗಿ ಹೋಗಿದೆ. ಸೇತುವೆ ಮುಳುಗಡೆಯಿಂದ ಜನರಿಗೆ ಓಡಾಡಲು ರಸ್ತೆ ಸಂಪರ್ಕ ಬಂದ್ ಆಗಿದ್ದು ಜನರು ಪರದಾಡುವಂತೆ ಆಗಿದೆ.

Exit mobile version