Site icon PowerTV

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ ವಿಜಯೇಂದ್ರ ಹೆಸರು ಘೋಷಣೆ ಸಾಧ್ಯತೆ!?

ಬೆಂಗಳೂರು: ರಾಜ್ಯ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ​ ಹೆಚ್ಚಾಗಿದ್ದು ಈ ನಡುವೆ ನೂತನ ಸಾರಥಿಯಾಗಿ ಲಿಂಗಾಯತ ಸಮುದಾಯದ ಮುಖಂಡನ ಹೆಸರು ಕೇಳಿಬರುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಸೌಜನ್ಯ ಪ್ರಕರಣ ಮರು ತನಿಖೆಗೆ ಶಾಸಕ ಪೂಂಜ ಸಿಎಂಗೆ ಮನವಿ

ಬಿ.ವೈ.ವಿಜಯೇಂದ್ರ ಇತ್ತೀಚೆಗೆ ಬಿಜೆಪಿ ವರುಷ್ಠರಾದ ಅಮಿತ್ ಶಾ, ನಡ್ಡಾ ಭೇಟಿ ಮಾಡಲು ದೆಹಲಿಗೆ ಭೇಟಿನೀಡಿದ್ದ ಬೆನ್ನಲ್ಲೇ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ, ಈ ಕುರಿತು ಇನ್ನೊಂದು ವಾರದಲ್ಲಿ ಹೈಕಮಾಂಡ್​ ನೂತನ ಸಾರಥಿ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಾತ್ರ ನಿರ್ಣಾಯಕವಾದದ್ದಾಗಿದೆ, ಈ ಸಂದರ್ಭದಲ್ಲಿ  ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಲ್ಲಿ ಬಿಎಸ್‌ವೈ ರಾಜಕೀಯವಾಗಿ ಮತ್ತೆ ಚುರುಕಾಗಲಿದ್ದಾರೆ ಎನ್ನುವ ತಂತ್ರಗಾರಿಕೆಯನ್ನು  ದೆಹಲಿ ವರಿಷ್ಠರು ಅನುಸರಿಸಲಿದ್ದಾರೆ.

ಬಿಜಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯಿತರಿಗೆ ನೀಡಿದ್ದೇ ಆದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗ ಅಥವಾ ಹಿಂದುಳಿದ ವರ್ಗಕ್ಕೆ ನೀಡುವ ಸಾಧ್ಯತೆ ಇದೆ, ಈ ಎಲ್ಲಾ ಗೊಂದಲಗಳಿಗೂ ಮುಂದಿನ ವಾರವೇ ತೆರೆ ಬೀಳುವ ಸಾಧ್ಯತೆ ಇದೆ.

Exit mobile version