Site icon PowerTV

ಸಿಎಂ ಆಯ್ಕೆ ಮಾಡೋದು ಸೋನಿಯಾ, ರಾಹುಲ್ ಅವ್ರು : ಜಮೀರ್ ಅಹ್ಮದ್

ಮಂಡ್ಯ : ‘ನನಗೆ ಸಿಎಂ ಮಾಡೋದು ಗೊತ್ತಿದೆ, ಕೆಳಗೆ ಇಳಿಸೋದು ಗೊತ್ತಿದೆ’ ಎಂದಿರುವ ಬಿ.ಕೆ ಹರಿಪ್ರಸಾದ್ ಗೆ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ತಿರುಗೇಟು ನಿಡಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಸಿಎಂ ಆಯ್ಕೆ ಮಾಡೋದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಎಂದು ಟಾಂಗ್ ಕೊಟ್ಟಿದ್ದಾರೆ.

ಸಿಎಂ ಆಯ್ಕೆಯನ್ನ ನಾನು ಮಾಡೋಕೆ ಆಗಲ್ಲ, ಹರಿಪ್ರಸಾದ್ ಕೂಡ ಮಾಡೋಕೆ ಆಗಲ್ಲ. ಸಿಎಂ‌ ಆಯ್ಕೆ ತೀರ್ಮಾನ ಮಾಡೋದು ಹೈಕಾಮಾಂಡ್. ಇಲ್ಲಿ ಯಾರು ಆಯ್ಕೆ ಮಾಡೋಕೆ ಆಗಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರ್ತಾರೆ ಎಂದು ಜಮೀರ್ ಹೇಳಿದ್ದಾರೆ.

ಇದನ್ನೂ ಓದಿ : ಬಹಳ ನೋವಿನಿಂದ ಅಮಾನತು ಮಾಡಿದ್ದೇನೆ : ಯು.ಟಿ ಖಾದರ್

ನಾನು ಆ ಪಕ್ಷದಲ್ಲಿ ಇದ್ದೇನಾ?

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ನಡೆಯ ಬಗ್ಗೆ ನಾನು ಹೇಳಲ್ಲ. ಮೈತ್ರಿ ವಿಚಾರದ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ. ನಾನು ಆ ಪಕ್ಷದಲ್ಲಿ ಇಲ್ಲ, ಅದರ ಬಗ್ಗೆ ಮಾತಾಡಲ್ಲ. ನಾನು ಕಾಂಗ್ರೆಸ್‌ನಲ್ಲಿ‌ ಇದೀನಿ, ಕಾಂಗ್ರೆಸ್ ಬಗ್ಗೆ ಮಾತಾಡುತ್ತೇನೆ. ಅವರು ವಿರೋಧ ಪಕ್ಷದಲ್ಲಿ ಇದಾರ, ನಮ್ಮ ವಿರುದ್ಧ ಹೋರಾಡುತ್ತಾರೆ ಎಂದು ಕುಮಾರಸ್ವಾಮಿ ಬಗ್ಗೆ ಜಮೀರ್ ಸಾಫ್ಟ್ ಕಾರ್ನರ್ ತೋರಿದ್ದಾರೆ.

Exit mobile version