Site icon PowerTV

Love You : ಯುವತಿಗೆ ರ್ಯಾಪಿಡೋ ಬೈಕ್ ಚಾಲಕನಿಂದ ಕಿರುಕುಳ

ಬೆಂಗಳೂರು : ರ್ಯಾಪಿಡೋ ಬೈಕ್ ಚಾಲಕನೊಬ್ಬ ಯುವತಿಗೆ ಐ ಲವ್ ಯೂ ಎಂಬ ಸಂದೇಶ ಕಳುಹಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಣಿಪುರದಲ್ಲಿ ನಡೆದ ಅಮಾನುಷ ಕೃತ್ಯ ಖಂಡಿಸಿ ನಗರದ ಟೌನ್ ಹಾಲ್ ಬಳಿನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಯುವತಿಗೆ ಕಿರುಕುಳ ನೀಡಲಾಗಿದೆ.

ಟೌನ್ ಹಾಲ್ ನಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರೋ ಮನೆಗೆ ಹೋಗಲು ಯುವತಿ ರ್ಯಾಪಿಡೋ ಬುಕ್ ಮಾಡಿದ್ದರು. ಚಾಲಕ ರ್ಯಾಪಿಡೋ ಬುಕ್ ಮಾಡಿದ ಬೈಕ್ ಬಿಟ್ಟು ಬೇರೆ ಬೈಕ್ ತಂದಿದ್ದನು. ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಡ್ಯಾಪಿಡೋ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ.

Love You ಅಂತ ಮೆಸೇಜ್

ಇದಲ್ಲದೆ, ಯುವತಿಗೆ ಡ್ರಾಪ್ ಮಾಡಿದ ನಂತರ ಮೆಸೇಜ್ ಮೂಲಕವೂ ಕಿರುಕುಳ ನೀಡಿದ್ದಾನೆ. ಮ್ಯಾಮ್ Love you ಎಂದು ಹಾರ್ಟ್ ಸಿಂಬಲ್ ನೊಂದಿಗೆ ಮೆಸೇಜ್ ಮಾಡಿದ್ದಾನೆ. ಈ ಸಂಬಂಧ ಯುವತಿ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು #SexualHarassement ಹ್ಯಾಶ್ ಟ್ಯಾಂಗ್ ನೊಂದಿಗೆ ಟ್ವಿಟ್ ಮಾಡಿದ್ದಾಳೆ. ಯುವತಿಯ ಟ್ವಿಟ್ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯುವತಿಯನ್ನು ಸಂಪರ್ಕ ಮಾಡಿದ್ದಾರೆ.

Exit mobile version