Site icon PowerTV

‘ಡಿ ಬಾಸ್’ ಹಾಡಿಗೆ ಮಳೆಯಲ್ಲೇ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು

ಚಾಮರಾಜನಗರ : ಸುರಿಯುತ್ತಿದ್ದ ತುಂತುರು ಮಳೆಯನ್ನು ಕಂಡ ಸೀರೆಯುಟ್ಟಿದ್ದ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ್ದಾರೆ.

ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಸ್ಯಾರಿ ಡೇ’ ವೇಳೆ ಈ ಘಟನೆ ನಡೆದಿದೆ.

ಇಂದು ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಭ್ರಮ ಪ್ರಯುಕ್ತ ‘ಸ್ಯಾರಿ ಡೇ’ ಕಾರ್ಯಕ್ರಮ‌ ಆಯೋಜಿಸಲಾಗಿತ್ತು. ಈ ವೇಳೆ ತುಂತುರು ಮಳೆ ಬೀಳುವುದನ್ನು ಕಂಡ ವಿದ್ಯಾರ್ಥಿನಿಯರು ನಟ ದರ್ಶನ್ ಅವರ ‘ಸುಂಟರಗಾಳಿ.. ಸುಂಟರಗಾಳಿ’ ಎಂಬ ಹಾಡಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

ಸೀರೆ ಉಟ್ಟು ನಟ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ದಿಗ್ಗಜರು ಚಿತ್ರದ ‘ಓ ಗೆಳೆಯ..!’ ಎಂಬ ಹಾಡಿಗೂ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಸೀರೆ ಉಟ್ಟು ಕುಣಿದ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗಿದ್ದು, ಯುವತಿಯರ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Exit mobile version