Site icon PowerTV

ರೈತರಿಗೆ ಹೆಣ್ಣು ಕೊಡದ ಪೋಷಕರು: ಕನ್ಯಾಭಾಗ್ಯ ಯೋಜನೆ ಜಾರಿಗೆ ಆಗ್ರಹಸಿ ಸಿಎಂಗೆ ಪತ್ರ ಬರೆದ ಯುವಕರು

ಹಾವೇರಿ : “ಕನ್ಯಾಭಾಗ್ಯ” ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೊಂದ ಯುವ ರೈತರು ಪತ್ರ ಬರೆದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಇದನ್ನೂ ಓದಿ: ನನಗೆ ಸಿಎಂ ಮಾಡೋದು ಗೊತ್ತಿದೆ ಕೆಳಗೆ ಇಳಿಸೋದು ಗೊತ್ತಿದೆ: ಸಿದ್ದರಾಮಯ್ಯ ವಿರುದ್ದ ಬಿ.ಕೆ.ಹರಿಪ್ರಸಾದ್​ ಪರೋಕ್ಷ ವಾಗ್ದಾಳಿ

ಮುಂಗಾರುಮಳೆ ಕೈ ಕೊಟ್ಟ ಬೆನ್ನಲ್ಲೇ ಯುವಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಸಂಕಷ್ಟದಲ್ಲಿರೋ ರೈತರ ಮನೆಗೆ ಹೆಣ್ಣು ಕೊಡಲು ಜನ ಮುಂದೇ ಬರುತ್ತಿಲ್ಲ, ಹೀಗಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಗಳ ಯುವಕರಿಂದ ಸಿಎಂಗೆ ಪತ್ರ ಬರೆಯಲಾಗಿದೆ.

ರೈತರಿಗೆ ಜನ ಹೆಣ್ಣು ಕೊಡಲು ಪ್ರೋತ್ಸಾಹಿಸುವಂತ “ಕನ್ಯಾಭಾಗ್ಯ” ಯೋಜನೆ ಜಾರಿಮಾಡಿ ರೈತನನ್ನ ಮದುವೆಯಾದ್ರೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ, ರೈತನನ್ನ ವಿವಾಹವಾದ ಯುವತಿಗೆ ಉದ್ಯೋಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ, ರೈತನನ್ನು ಮದುವೆಯಾದ ಹೆಣ್ಣುಮಕ್ಕಳಿಗೆ ಮಾಸಿಕ ಸಹಾಯಧನ ಸೇರಿ ಹಲವು ಯೋಜನೆಗಳ್ನು ಜಾರಿ ಮಾಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮುಖೇನ ಆಗ್ರಹಿಸಿ ಮನವಿ ಮಾಡಿಕೊಂಡಿದ್ದಾರೆ.

Exit mobile version