Site icon PowerTV

ಸಾಲಗಾರನ ಕಿರುಕುಳ : ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಶರಣು

ಧಾರವಾಡ : ಸಾಲಗಾರನ ಕಿರುಕುಳ ತಾಳಲಾರದೆ ಮನನೊಂದು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಧಾರವಾಡದ ಕೆಲಗೇರಿ ಬಡಾವಣೆಯ ಚೈತನ್ಯ ನಗರದಲ್ಲಿ ಈ ದುರ್ಘಟನೆ ನಡೆದಿದೆ. ನಿಂಗರಾಜ್ ಸಿದ್ದಪ್ಪನವರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ವ್ಯಕ್ತಿ ತನಗಾದ ಅನ್ಯಾಯದ ಬಗ್ಗೆ ವಿಡಿಯೋ ಮಾಡಿದ್ದಾರೆ.

ಮೃತ ನಿಂಗರಾಜ್ 2018ರಲ್ಲಿ ಆನಂದ ಪಾಸ್ತೆ ಎಂಬುವವರ ಬಳಿ 10 ಲಕ್ಷ ರೂ. ಸಾಲ ಪಡೆದಿದ್ದರು. ಕರೆಪ್ಪ ಗುಳೆನವರ ಎಂಬುವವರ ಮೂಲಕ ಪಾಸ್ತೆಯಿಂದ ಸಾಲ ಪಡೆದಿದ್ದರು. ಕರೆಪ್ಪ ಗುಳೆನವರ ಹೆಸರಿನಲ್ಲಿ ಸಾಲಕ್ಕೆ ಮನೆ ಖರೀದಿ ಪತ್ರ ಅಡಮಾನ ಇಟ್ಟಿದ್ದರು.

ಇದನ್ನೂ ಓದಿ : ಕೌಟುಂಬಿಕ ಕಲಹ ಹಿನ್ನಲೆ ಪತ್ನಿಯನ್ನೇ ಕೊಂದ ಪತಿ

10 ಲಕ್ಷಕ್ಕೆ 18 ಲಕ್ಷ ಕಮಾಯ್

ಖರೀದಿ ಪತ್ರ ಇಟ್ಟುಕೊಂಡು ಮೃತ ನಿಂಗರಾಜ್ ಗೆ ಬಡ್ಡಿಗಾಗಿ ಪೀಡಿಸುತ್ತಿದ್ದರು. 10 ಲಕ್ಷಕ್ಕೆ 18 ಲಕ್ಷ ತುಂಬಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ವತಃ ನಿಂಗರಾಜ್ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಸಾಲಗಾರನ ಕಿರುಕುಳದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ಮೋಸ ಮಾಡಿದವರ ಹೆಸರು ನಿಂಗರಾಜ್ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ತಿಳಿದ ಕೂಡಲೇ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Exit mobile version