Site icon PowerTV

ಹರಿಪ್ರಸಾದ್ ಅಸಮಾಧಾನದ ಬಗ್ಗೆ ಮೌನ ಮುರಿದ ಡಿಕೆಶಿ

ಬೆಂಗಳೂರು : ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿರುವ ಬಿ.ಕೆ ಹರಿಪ್ರಸಾದ್ ನಡೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ತಿಳ್ಕೊಂಡಿಲ್ಲ.. ಅದರ ಬಗ್ಗೆ ತಿಳ್ಕೊಂಡು ಹೇಳುತ್ತೇನೆ. ಆ ವಿಚಾರ ನನಗೆ ಗೊತ್ತಿಲ್ಲ, ರಾಜಕಾರಣದಲ್ಲಿ ಎಲ್ಲರೂ ಸಮಾನರಾಗಿ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ.

ಹಾಲಿನ ದರ ಏರಿಕೆ ವಿಚಾರವಾಗಿ ಮಾತನಾಡಿ, ನಾನು ಓರ್ವ ರೈತನಾಗಿ ಹೇಳುತ್ತೇನೆ. ಹಿಂದೆ 36 ರೂಪಾಯಿ ಮಾಡಬೇಕು ಅಂತ ಇತ್ತು. ಅಂದ್ರೆ,‌ ಲೀಟರ್ ಗೆ 5 ರೂಪಾಯಿ ಏರಿಕೆ ಮಾಡಬೇಕು ಅಂತ ಹೇಳಿದ್ದೆ. ಆ ಹಣ ರೈತರಿಗೆ ಹೋಗಬೇಕಿದೆ. ಔಷಧಿ ಆಹಾರದ ಬೆಲೆ ಜಾಸ್ತಿಯಾಗಿದೆ. ಇದು ರೈತನಿಗೆ ತಲುಪಬೇಕಿದೆ ಎಂದರು.

ಇದನ್ನೂ ಓದಿ : ಕಾದು ನೋಡಿ‌.. ರಾಜಕಾರಣ ಏನೇನು ಆಗುತ್ತೆ : ಹೊಸ ಬಾಂಬ್ ಸಿಡಿಸಿದ ಹರಿಪ್ರಸಾದ್

3 ರೂ. ಹೆಚ್ಚಳದಿಂದ ಲಾಸ್ ಆಗ್ತಿದೆ

ಆ ದೃಷ್ಟಿಯಿಂದ 5 ರೂಪಾಯಿ ಕೊಡಬೇಕು ಅಂತ ಹೇಳಿದ್ದೆ. ಈಗ ಸಿಎಂ 3 ರೂಪಾಯಿ ಮಾಡಿದ್ದಾರೆ. ಈಗಲೂ ಕೂಡ ಲಾಸ್ ಆಗ್ತಿದೆ. ರೈತರಿಗೆ ನಷ್ಟ ಆಗ್ತಿದೆ. ಹೊರಗಡೆ ಅವರು ಬಂದು ಹಾಲು ಮಾರಾಟ ಮಾಡ್ತಿದಾರೆ. ಬಿಜೆಪಿಯವರು ಬೇಕಿದ್ರೆ ಟೀಕೆ ಮಾಡ್ಲಿ, ಅವರು ಇರೋದೇ ಟೀಕೆ ಮಾಡೋಕೆ. ಬಿಜೆಪಿ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ ನೀಡುತ್ತಿದ್ದಾರೆ. ಪಾಪ ಚೆನ್ನಾಗಿ ಇರಲಿ ಬಿಡಿ ಎಂದು ಕುಟುಕಿದರು.

ಅವರಿಗೆಲ್ಲ ನಾವು ಹೇಳಬೇಕಲ್ಲ?

ಪಿಎಸ್ಐ ಅಕ್ರಮ ನೇಮಕಾತಿ ನ್ಯಾಯಾಂಗ ತನಿಖೆಗೆ ವಹಿಸಿದ ವಿಚಾರವಾಗಿ ಮಾತನಾಡಿ, ಹಿಂದೆ ಇದಕ್ಕೆ ನಾವು ಹೋರಾಟ ಮಾಡಿದ್ವಿ. ನ್ಯಾಯ ಸಿಗಬೇಕು, ಅದಕ್ಕೆ ಸರ್ಕಾರ ತನಿಖೆಗೆ ವಹಿಸಿದೆ. ನಾವು ಸುಮ್ಮನೆ ಇದ್ದರೂ ಅವ್ರೇ ಕೇಳ್ತಿದ್ರು. ನಿನ್ನೆ ಮೊನ್ನೆ ಸಿಎಂ ಕೂಡ ಕೇಳಿದ್ದಾರೆ. ಎರಡು ತಿಂಗಳಾಯ್ತು ಯಾಕೆ ಏನು ಮಾಡಿಲ್ಲ ಅಂತ. ಅವರಿಗೆಲ್ಲ ನಾವು ಹೇಳಬೇಕಲ್ಲ? ಎಂದು ಚಾಟಿ ಬೀಸಿದರು.

Exit mobile version