Site icon PowerTV

‘ಗೃಹಲಕ್ಷ್ಮೀ’ ಅರ್ಜಿ ಭರ್ತಿಗೆ ಹಣ ವಸೂಲಿ! : ಪವರ್ ಟಿವಿಗೆ ವಿಡಿಯೋ ಲಭ್ಯ

ಚಿಕ್ಕಬಳ್ಳಾಪುರ : ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳ ಲಾಭ ಪಡೆಯಬೇಕೆ? ಹಾಗಿದ್ರೆ, ನೀವು ಅಧಿಕಾರಿಗಳ ‘ಕೈ’ ಬೆಚ್ಚಗೆ ಮಾಡಲೇಬೇಕು! ಹಣ ವಸೂಲಿ ವಿಡಿಯೋ ಪವರ್ ಟಿವಿಗೆ ಲಭ್ಯವಾಗಿದೆ. 

ಹೌದು, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ. ಯೋಜನೆ ಫಲಾನುಭವಿಯಾಗಲು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಅರ್ಜಿ ಭರ್ತಿ ಮಾಡಲು ಹಣ ವಸೂಲಿ ಮಾಡಿ ದಂಧೆ ಶುರುಮಾಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ದೇವರ ಗುಡಿಪಲ್ಲಿ ಗ್ರಾಮ ಪಂಚಾಯಿತಿ ಆಪರೇಟರ್ ಜಯರಾಮ್ ​ಅರ್ಜಿ ಭರ್ತಿ ಮಾಡಲು ಹಣ ವಸೂಲಿಗಿಳಿದಿದ್ದಾನೆ. ಅರ್ಜಿ ಸಲ್ಲಿಸಲು ಬರುವ ಮಹಿಳೆಯರಿಂದ 50 ರೂಪಾಯಿಯಂತೆ ವಸೂಲಿ ಮಾಡಲಾಗುತ್ತಿದೆ. ಜಯರಾಮ್​ಗೆ ಪಂಚಾಯಿತಿ ಅಧಿಕಾರಿಗಳ ಕೃಪಾಕಟಾಕ್ಷಾ ಇದ್ಯಾ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ನೋಂದಣಿ ಕೇಂದ್ರಕ್ಕೆ ದಿಢೀರ್ ಭೇಟಿ ಕೊಟ್ಟ ಡಿಸಿಎಂ ಡಿಕೆಶಿ

Server Down ಕಾಟ?

ಕರ್ನಾಟಕ ಒನ್, ದಾವಣಗೆರೆ ಒನ್ ನಲ್ಲಿ ಸರ್ವರ್ Busy.. Busy ಅಂತ ಬರ್ತಿದೆ. ಎರಡು ದಿನಗಳಿಂದ ಸರ್ವರ್ ಇಲ್ಲದೆ ಮಹಿಳೆಯರು ಪರದಾಡ್ತಿದ್ದಾರೆ. ಈವರೆಗೂ ಅತಿ ಕಡಿಮೆ ಸಂಖ್ಯೆ ಯಲ್ಲಿ ನೋಂದಣಿ ಆಗಿದೆ. ಕರ್ನಾಟಕ ಒನ್ ಕೇಂದ್ರದಲ್ಲಿ  ಕೆಲವೇ ಕೆಲವು ಗೃಹಲಕ್ಷ್ಮೀ ಅರ್ಜಿಗಳು ಸಲ್ಲಿಕೆ ಆಗಿದೆ. ಬೆಳಗ್ಗೆ 5 ಗಂಟೆಯಿಂದಲೂ ಮಹಿಳೆಯರು ಕ್ಯೂನಲ್ಲಿ ನಿಂತಿದ್ದಾರೆ. ಅರ್ಜಿ ಸಲ್ಲಿಕೆ ಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಪ್ರಕ್ರಿಯೆ ಸುಲಭವಾಗಿಸಬೇಕು, ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು ಅಂತ ಮಹಿಳೆಯರು ಒತ್ತಾಯಿಸಿದ್ದಾರೆ.

Exit mobile version