Site icon PowerTV

ಮಹಿಳೆಯರಿಂದ ಅತ್ಯಾಚಾರ ಕಾನೂನು ದುರ್ಬಳಕೆ

ಬೆಂಗಳೂರು : ಮಹಿಳೆಯರು ಅತ್ಯಾಚಾರದ ಕಾನೂನನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉತ್ತರಾಖಂಡ್ ಹೈಕೋರ್ಟ್ ಹೇಳಿದೆ.

ಮಹಿಳೆಯೊಬ್ಬಳೊಂದಿಗೆ ವ್ಯಕ್ತಿಯೊಬ್ಬ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು. ಆಕೆಯನ್ನು ಮದುವೆಯಾಗಬೇಕು ಎಂದು ಆತನ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಾಗ ಜಸ್ಟಿಸ್ ಶರದ್‌ ಕುಮಾರ್ ಶರ್ಮಾ ಈ ತೀರ್ಪು ನೀಡಿದ್ದಾರೆ.

ಮನೋಜ್ ಕುಮಾರ್ ಆರ್ಯ ಎಂಬ ವ್ಯಕ್ತಿ 2005ರಿಂದ ದೂರುದಾರರೊಂದಿಗೆ ಒಮ್ಮತದ ಲೈಂಗಿಕ ಸಂಬಂಧವನ್ನು ಹೊಂದಿದ್ದರು. ಇಬ್ಬರಲ್ಲಿ ಯಾರಿಗಾದರೂ ಕೆಲಸ ಸಿಕ್ಕಿದ ತಕ್ಷಣ ಮದುವೆಯಾಗುವುದಾಗಿ ಇಬ್ಬರೂ ಪರಸ್ಪರ ಭರವಸೆ ನೀಡಿದ್ದರು ಎಂದು ಹೈಕೋರ್ಟ್ ಗಮನಿಸಿದೆ. ವಿವಾಹದ ಭರವಸೆಯ ಮೇರೆಗೆ ಪುರುಷ ಮತ್ತು ದೂರುದಾರರು ದೈಹಿಕ ಸಂಬಂಧ ಬೆಳೆಸಿದ್ದರು.

Exit mobile version