Site icon PowerTV

ವಿಪಕ್ಷ ನಾಯಕನಿಲ್ಲದೇ ಅಧಿವೇಶನ ಮುಕ್ತಾಯ!: ಇತಿಹಾಸ ಪುಟ ಸೇರಿದ ರಾಜ್ಯ ವಿಧಾನಸಭೆ !

ಬೆಂಗಳೂರು: ರಾಜ್ಯ ವಿಧಾನಸಭಾ ಅಧಿವೇಶನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ಮುಗಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿದೆ.

ಇದನ್ನೂ ಓದಿ: ಎನ್​ಡಿಎ ಗೆ ಬೆಂಬಲ ನೀಡುವ ಪ್ರಸ್ತಾಪ ತಳ್ಳಿಹಾಕಿದ ಮಾಜಿ ಪ್ರಧಾನಿ ದೇವೇಗೌಡ

ವಿಧಾನಸಭೆ ಅಧಿವೇಶನ ಆರಂಭವಾದಾಗಿನಿಂದಲೂ ರಾಜ್ಯ ಬಿಜೆಪಿಯಲ್ಲಿ ಗೊಂದಲವೋ ಗೊಂದಲ, ವಿರೋಧ ಪಕ್ಷದ ನಾಯಕನಿಲ್ಲದೇ ಬಜೆಟ್ ಮೇಲಿನ ಚರ್ಚೆಯ ವೇಳೆ ನಾಮ್‌ಕೇವಾಸ್ತೆ ವಿಪಕ್ಷದ ಸಾರಥ್ಯವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಹಿಸಿಕೊಂಡಿದ್ದರು.

ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿದೆ, ಇದರೊಂದಿಗೆ ಅಧಿವೇಶನದಲ್ಲಿ ಕೇಸರಿ ಪಡೆ ನಾಯಕರು ತೀವ್ರ ಮುಜುಗರಕ್ಕೆ ಈಡಾಗಿದ್ದರು, ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗೇ ಉಳಿದಿದ್ದರು ಬಿಜೆಪಿ ವರಿಷ್ಠರು ತಲೆಕೆಡಿಸಿಕೊಂಡಿಲ್ಲ.

ರಾಜ್ಯ ವಿಧಾನಸಭಾ ಅಧಿವೇಶನದ ಆರಂಭವಾದಾಗಿನಿಂದ ಗಲಾಟೆ,ಗದ್ದಲ, ಪ್ರತಿಭಟನೆಗಳಿಂದಲೇ ಮುಗಿದಿದ್ದು ಒಟ್ಟಾರೆ ಅಧಿವೇಶನವು ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯೇ ನಡೆಯದೇ ಇಂದು ಮುಕ್ತಾಯವಾಗಲಿದೆ.

Exit mobile version