Site icon PowerTV

ಮೂರ್ಛೆ ತಪ್ಪಿದ ಪ್ರಯಾಣಿಕನ ಪ್ರಾಣ ಉಳಿಸಿದ ಬಸ್ ಚಾಲಕ

ತುಮಕೂರು : ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸನಲ್ಲಿ ಒಬ್ಬ ವ್ಯಕ್ತಿಗೆ ಉಸಿರಾಡಲು ತೊಂದರೆಯಾದ ಹಿನ್ನೇಲೆ ಮೂರ್ಛೆ ತಪ್ಪಿದ್ದಾನೆ ಇದು ತುಮಕೂರಿನ ತಿಪಟೂರು ಪಟ್ಟಣದಲ್ಲಿ ನೆಡೆದಿರುವ ಘಟನೆ.

ಬೆಂಗಳೂರಿಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್, ಅದರಲ್ಲಿ ಈಶ್ವರ್ ರೆಡ್ಡಿ ಎಂಬುವವರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆ ವೇಳೆಯಲ್ಲಿ ಆ ವ್ಯಕ್ತಿಗೆ ಉಸಿರಾಡಲು ತೊಂದರೆಯಾಗಿ ಮೂರ್ಛೆ ತಪ್ಪಿ ಬಿದ್ದಿದ್ದಾನೆ,

ಇದನ್ನು ಓದಿ : ಡಾಕ್ಟರೇಟ್ ಸ್ವೀಕರಿಸಿದ ರೈತ ನಾಯಕ ಯಡಿಯೂರಪ್ಪ

ಬಿದ್ದಿರುವ ರಭಸಕ್ಕೆ ಮೂಗಿನಲ್ಲಿ ರಕ್ತ ಸ್ರಾವ.

ಅದನ್ನು ಅಲ್ಲೆ ಇದ್ದ ನಿರ್ವಾಹಕ ಓಂಕಾರ್ ಚಾಲಕನಿಗೆ ವಿಷಯ ತಿಳಿಸಿದ್ದಾನೆ, ಬಳಿಕ ತಡ ಮಾಡದೆ ಆಂಬ್ಯುಲೆನ್ಸ್ ರೀತಿ ಬಸ್ ಚಲಾಯಿಸಿ ಪ್ರಯಾಣಿಕನನ್ನು ಚಾಲಕ ಪ್ರಕಾಶ್ ಬಸ್ ಅನ್ನು ತಿಪಟೂರು ತಾಲ್ಲೂಕು ಆಸ್ಪತ್ರೆಗೆ ಚಲಾಯಿಸಿದ್ದಾರೆ. ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಈಶ್ವರ್ ರೆಡ್ಡಿ ಪ್ರಾಣ ಉಳಿದಿದೆ.

ಚಾಲಕ ಮತ್ತು ನಿರ್ವಹಕನ ಮಾನವೀಯತೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ

Exit mobile version