Site icon PowerTV

ಗಾಂಜಾ ಮತ್ತಿನಲ್ಲಿ ಲಾಂಗ್​ ಹಿಡಿದು ಪುಡಿರೌಡಿಗಳ ಅಟ್ಟಹಾಸ!

ಆನೇಕಲ್: ಗಾಂಜಾ ಮತ್ತಿನಲ್ಲಿ ಲಾಂಗ್ ಹಿಡಿದು ಬೀದಿ ಬೀದಿಯಲ್ಲಿ ಓಡಾಟ ನಡೆಸಿದ ಪುಡಿರೌಡಿಗಳ ಅಟ್ಟಹಾಸಕ್ಕೆ ಕಾಲೇಕು ವಿದ್ಯಾರ್ಥಿಗಳು ಬೆಚ್ಚಿಬಿದ್ದಿರುವ ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ: ವಿಪಕ್ಷ ನಾಯಕನಿಲ್ಲದೇ ಅಧಿವೇಶನ ಮುಕ್ತಾಯ!: ಇತಿಹಾಸ ಪುಟ ಸೇರಿದ ರಾಜ್ಯ ವಿಧಾನಸಭೆ !

ಹಂಪಲಘಟ್ಟ ಗ್ರಾಮದ ಪ್ರತಾಪ್‌ ಬಂಧತ ಆರೋಪಿ, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆನೇಕಲ್ ತಾಲ್ಲೂಕಿನ ಹೊಸೂರು ರಸ್ತೆಯಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು ಗಾಂಜ ಮತ್ತಿನಲ್ಲಿ ಲಾಂಗ್ ಹಿಡಿದ ನಗರದ ಪ್ರಮುಖ ಬೀದಿಗಳಲ್ಲಿ ಓಡಾಡುವ ಮೂಲಕ ಸ್ಥಳೀಯರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಬೆಚ್ಚಿಬಿದ್ದುದ್ದಾರೆ.

ಸದ್ಯ ಈ ಘಟನೆಯೂ ಆನೇಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.

Exit mobile version