Site icon PowerTV

ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ! ಗ್ರಾಹಕರ ಜೇಬಿಗೆ ಕತ್ತರಿ

ಬೆಂಗಳೂರು : ರಾಜ್ಜ ಸರ್ಕಾರ ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ನೀಡಿದ್ದ ಶಾಕ್ ಇಂದಿನಿಂದ ತಲುಗಲಿದೆ. ರಾಜ್ಯ ಸರ್ಕಾರ ಅಬಕಾರಿ ಸುಂಕವನ್ನು ಶೇ.20 ರಷ್ಟು ಏರಿಕೆ ಮಾಡಿರುವುದರಿಂದ ಏರಿಕೆಯಾದ ಹೊಸ ಬೆಲೆಯಲ್ಲಿ ಶುಕ್ರವಾರದಿಂದ  ಮದ್ಯ ಮಾರಾಟವಾಗಲಿದೆ.

ಇದನ್ನೂ ಓದಿ: ಟ್ರಾಫಿಕ್​ ಪೊಲೀಸ್ ಮೇಲೆ ಹಲ್ಲೆ ಪ್ರಮುಖ ಆರೋಪಿ ಬಂಧನ!

ರಾಜ್ಯ ಸರ್ಕಾರದ ಮ್ರಮುಖ 5 ಗ್ಯಾರೆಂಟಿ ಯೋಜನೆಗಳಿ ಬೇಕಾದ ಸಂಪನ್ಮೂಲ ಕ್ರೂಢಿರಣ ಮಾಡಲು ಈ ಬಾರಿಯ ಬಜೆಟ್​ ನಲ್ಲಿ ಕೆಲವೊಂದು ಇಲಾಖೆಗಳಿಗೆ ಆದಾಯ ಹೆಚ್ಚಳಕ್ಕೆ ಸೂಚನೆ ನೀಡಿದ ಬೇನ್ನಲ್ಲೇ ಅಬಕಾರಿ ಇಲಾಖೆಯು ಮದ್ಯದ ಮೇಲಿನ ಸುಂಕವನ್ನು ಶೇ.20 ರಷ್ಟು ಹೆಚ್ಚಳಕ್ಕೆ ಮುಂದಾಗಿದೆ.

ಸರ್ಕಾರಿ ಆದೇಶದ ಪ್ರಕಾರ ಗುರುವಾರ ಮಧ್ಯರಾತ್ರಿಯಿಂದ ಈ ದರ ಹೆಚ್ಚಳ ಜಾರಿಗೆ ಬರಲಿದೆ. ಆದರೆ, ರಾಜ್ಯದ ಕೆಲ ಜಿಲ್ಲೆಗಳ ರಿಟೇಲ್ ಮದ್ಯ ಮಾರಾಟದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಗುರುವಾರ ರಾತ್ರಿಯೇ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಿದ ಪ್ರಕರಣಗಳೂ ವರದಿಯಾಗಿವೆ.

ಸರ್ಕಾರ ಬಜೆಟ್‌ನಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥಹ ಇತರ ಮದ್ಯ ಗಳ ಸುಂಕವನ್ನು ಶೇ.20ರಷ್ಟು ಏರಿಕೆ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಿದ್ದನ್ನು ತಿಳಿಸಿತ್ತು. ಹೀಗಾಗಿ ಹಾಲಿ ದರಕ್ಕೆ ಹೋಲಿಸಿದಾಗ ಶೇ.10ರಷ್ಟು ಬಿಯರ್ ದರ ಹೆಚ್ಚಳವಾಗಲಿದೆ. ಐಎಂಎಲ್ ಒಂದು ಪೆಗ್ (60 ಎಂಎಲ್) ಗೆ 210-20 ಹೆಚ್ಚಳವಾಗುವ ಸಾಧ್ಯತೆಯಿದೆ.

Exit mobile version