Site icon PowerTV

ಪವರ್ ‘ಫರ್ನಿಚರ್ ಎಕ್ಸ್ ಪೋ’ಗೆ ಶಾಸಕ ಮುನಿರತ್ನ ಚಾಲನೆ

ಬೆಂಗಳೂರು : ಪವರ್ ಟಿವಿ ಪ್ರಾಯೋಜಕತ್ವದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಆಯೋಜಿಸಿರುವ ಪವರ್ ‘ಫರ್ನಿಚರ್ ಎಕ್ಸ್ ಪೋ’ಗೆ ಅದ್ದೂರಿ ಚಾಲನೆ ನೀಡಲಾಯಿತು.

ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 5 ಕಿಂಗ್ಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಪವರ್ ಫರ್ನಿಚರ್‌ ಎಕ್ಸ್ ಪೋಗೆ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿದ್ಯುಕ್ತ ಚಾಲನೆ ನೀಡಿದರು.

ಟೇಪ್ ಕತ್ತರಿಸಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ, ಹಲವು ಮಳಿಗೆಗೆ ಭೇಟಿ ನೀಡಿ ಫರ್ನಿಚರ್ಸ್ ಮತ್ತು ಹೋಮ್ ಡೆಕೋರ್​ಗ​ಳನ್ನು ವೀಕ್ಷಿಸಿದರು. ಪವರ್ ಟಿವಿ ಆಯೋಜಿಸಿರೋ ಎಕ್ಸ್ ಪೋಗೆ ಶುಭ ಹಾರೈಸಿದರು.

ಒಂದೇ ಸೂರಿನಡಿ ಮನೆಗೆ ಬೇಕಾದಂತಹ ಎಲ್ಲಾ ವಸ್ತುಗಳು ಲಭ್ಯ ಎಕ್ಸ್ ಪೋದಲ್ಲಿ ಲಭ್ಯವಿದೆ. ಶೇ.70 ರಷ್ಟು ರಿಯಾಯಿತಿದರದಲ್ಲಿ ಫರ್ನಿಚರ್‌ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸಬಹುದಾಗಿದೆ. ಈ‌ ಎಕ್ಸ್ ಪೋದಲ್ಲಿ‌ ಮಹಾರಾಜ ಸೋಫಾ, ಟೀಕ್ ವುಡ್ ಸೋಫಾ, ರೋಸ್ ವುಡ್ & ಲಕ್ಸುರಿ ಸೋಫಾ, ಡಿಸೈನರ್ ಸೋಫಾ, ಕಾಟ್ಸ್, ಉಯ್ಯಾಲೆ, ಡೈನಿಂಗ್ ಟೇಬಲ್, ಸೆಂಟರ್ ಟೇಬಲ್ಸ್, ಕಾರ್ಪೆಟ್ಸ್, ಕನ್ಸುಮರ್ ಐಟಮ್ಸ್ ಮುಂತಾದವುಗಳು ಗ್ರಾಹಕರ ಪ್ರಮುಖ ಆಕರ್ಷಣೆ.

ಒಟ್ಟಿನಲ್ಲಿ, ಇಂದಿನಿಂದ ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ. ಜನರು ಅತಿದೊಡ್ಡ ಫರ್ನಿಚರ್ ಮೇಳಕ್ಕೆ ಭೇಟಿ ನೀಡಿ ಹೋಲ್ ಸೇಲ್ ದರದಲ್ಲಿ ನಿಮ್ಮ ಮನೆಗೆ ನಿಮ್ಮಿಷ್ಟದ ಪೀಠೋಪಕರಣಗಳನ್ನು ಖರೀದಿಸಬಹುದು. ನಿಮ್ಮಿಷ್ಟದ ಫರ್ನಿಚರ್ಸ್ ನೀವು ಕೊಂಡುಕೊಳ್ಳಲು ನೀವು ಪವರ್ ಎಕ್ಸ್ ಪೋಗೆ ಭೇಟಿ ನೀಡಿ.

Exit mobile version