Site icon PowerTV

ನಮ್ಮ ಮೇಲೆ ತನಿಖೆ ಮಾಡಿಸ್ತಾರಂತೆ, ನಮಗೇನು ಭಯ ಇಲ್ಲ : ಗುಡುಗಿದ ಬೊಮ್ಮಾಯಿ

ಬೆಂಗಳೂರು : ನಮ್ಮ ಮೇಲೆ ತನಿಖೆ ಮಾಡಿಸ್ತಾರಂತೆ, ನಮಗೇನು ಭಯ ಇಲ್ಲ. ತನಿಖೆ ಮಾಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಅವಧಿಯ ಹಗರಣಗಳನ್ನೂ ತನಿಖೆ ಮಾಡಿಸಿ ಅಂದೆ. ಹೇ..! ಇಲ್ಲಾ ಇಲ್ಲ.. ಅಂತಾರೆ ಎಂದು ಕುಟುಕಿದರು.

ಟಾರ್ಗೆಟ್ ಮೀರಿ ಟ್ಯಾಕ್ಸ್ ಕಲೆಕ್ಷನ್ ಮಾಡಿದ್ದು ನಾವು. ಕೋವಿಡ್-19 ಇದ್ದಾಗಲೂ ತೆರಿಗೆ ಸಂಗ್ರಹ ಮಾಡಿದ್ವಿ. ನೀವು ಇದ್ದಿದಿದ್ರೆ ಬೊಕ್ಕಸವನ್ನು ಖಾಲಿ ಮಾಡ್ತಿದ್ರಿ. ನಮ್ಮ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಗಾಂಧಿ ಕೊಂದವರು ಗಾಂಧಿ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ : ಸಿದ್ದರಾಮಯ್ಯ

ಅತ್ಯಂತ ಕೆಟ್ಟ ಆರ್ಥಿಕ ನಿರ್ವಹಣೆ

ಗೃಹಲಕ್ಷ್ಮೀ ಅಪ್ಲಿಕೇಶನ್ ಎಲ್ಲಿದೆ ಅಂತ ನೋಡಬೇಕಾದ ಪರಿಸ್ಥಿತಿ ಬಂದಿದೆ. ಎಲ್ಲಿ ಹೋದ್ರೂ ಸರ್ವರ್ ಡೌನ್.. ಡೌನ್.. ಅಂತ ಬರ್ತಿದೆ. ವಿದ್ಯುತ್ ಬಿಲ್ ಡಬಲ್ ಹಾಕ್ತಿದ್ದಾರೆ. ಎಲ್ಲದರಲ್ಲೂ ಮೋಸ ಮಾಡ್ತಾ ಇದ್ದಾರೆ. ಅತ್ಯಂತ ಕೆಟ್ಟ ಆರ್ಥಿಕ ನಿರ್ವಹಣೆ 14ನೇ ಬಜೆಟ್ ನಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಗುಡುಗಿದರು.

ಯುಪಿಎ ಅವಧಿಯಲ್ಲಿ ಎಷ್ಟು ಬಂತು?

ಕೇಂದ್ರ ಸರ್ಕಾರದ ಬಗ್ಗೆ ಮಾತಾಡ್ತಾರೆ. ಬನ್ನಿ.. ಯುಪಿಎ ಅವಧಿಯಲ್ಲಿ ಎಷ್ಟು ಬಂತು? ನಮ್ಮ ಅವಧಿಯಲ್ಲಿ ಎಷ್ಟು ಬಂದಿದೆ ಅಂತ ಚರ್ಚೆ ಮಾಡೋಣ. ಸೋನಿಯಾ ಗಾಂಧಿ ಇವರಿಗೆ ಅಪಾಯಿಂಟ್ ಮೆಂಟ್ ಕೊಡ್ತಿರಲಿಲ್ಲ ಎಂದು ಚಾಟಿ ಬೀಸಿದರು.

Exit mobile version