Site icon PowerTV

ಕೊಟ್ಟಿಗೆಯಲ್ಲಿ ಹಚ್ಚಿದ ಸೊಳ್ಳೆ ಬತ್ತಿಗೆ ಭಸ್ಮವಾದ ದನಕರುಗಳು

ಹಾವೇರಿ : ಕೊಟ್ಟಿಗೆಯಲ್ಲಿ ಹಚ್ಚಿದ ಸೊಳ್ಳೆ ಬತ್ತಿ ಕಿಡಿ ಸ್ಪರ್ಶದಿಂದ ದನ ಕರುಗಳ ಸಮೇತ ಕೊಟ್ಟಿಗೆ ಸುಟ್ಟು ಹೋಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದನದ ಕೊಟ್ಟಿಗೆ ಹೊತ್ತಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬುಡಪನಹಳ್ಳಿ ಗ್ರಾಮದ ರೈತ ಮಾಲತೇಶಗೆ ಸೇರಿದ ದನಕರುಗಳು ಸಾವನ್ನಪ್ಪಿವೆ.

ರಾತ್ರಿ ವೇಳೆಯಲ್ಲಿ ಸೊಳ್ಳೆಕಾಟ ತಪ್ಪಿಸಲೆಂದು ರೈತ ಮಾಲತೇಶ ಕೊಟ್ಟಿಗೆಗೆ ಸೊಳ್ಳೆ ಬತ್ತಿಯನ್ನು ಹಚ್ಚಿದ್ದರು. ಬಳಿಕ ಸೊಳ್ಳೆ ಬತ್ತಿಯಿಂದ ಕೊಟ್ಟಿಗೆಗೆ ಕಿಡಿತಾಗಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ದನ ಕರುಗಳ ಸಮೇತ ಕೊಟ್ಟಿಗೆ ಸುಟ್ಟು ಹೋಗಿದೆ.

ಇದನ್ನು ಓದಿ : ಡ್ರಗ್ಗ್ ಚಾಕೋಲೆಟ್ ಮಾರಾಟ ಜಾಲ ಬಂಧಿಸಿದ ಪೊಲೀಸರು!

ರೈತ ಮಾಲತೇಶ ಕಂಗಾಲು

ಕೊಟ್ಟಿಗೆಯಲ್ಲಿದ್ದ ದನಕರುಗಳ ಜೊತೆಗೆ ಅಲ್ಲಿದ್ದ ಕೃಷಿ ಬಳಕೆಯ ವಸ್ತುಗಳು ಸಹ ಸುಟ್ಟು ಕರಕಲಾಗಿವೆ. ಹಲವು ವರ್ಷಗಳಿಂದ ಸಾಕಿದ್ದ ದನಕರುಗಳನ್ನು ಕಳೆದುಕೊಂಡು ರೈತ ಮಾಲತೇಶ ಕಂಗಲಾಗಿದ್ದಾರೆ.

Exit mobile version