Site icon PowerTV

‘ಹಾಸ್ಟೆಲ್​ ಹುಡುಗರಿಗೆ’ ಗ್ರೀನ್​ ಸಿಗ್ನಲ್ : ರಮ್ಯಾಗೆ ಮುಖಭಂಗ

ಬೆಂಗಳೂರು : ಹಾಸ್ಟೆಲ್ ಹುಡುಗರು ಚಿತ್ರಕ್ಕೆ ನೋಟಿಸ್ ಕೊಟ್ಟಿದ್ದ ರಮ್ಯಾಗೆ ಕೋರ್ಟ್​ ನಲ್ಲಿ ಮುಖಭಂಗವಾಗಿದೆ.

ಹೌದು, ಹಾಸ್ಟೇಲ್ ಹುಡುಗರು ತಂಡಕ್ಕೆ ಚಿತ್ರದಲ್ಲಿ ತಮ್ಮ ಸೀನ್ ತೆಗೆಯುವಂತೆ ರಮ್ಯಾ ಅವರು ಕೇಸ್ ಹಾಕಿ ನೋಟಿಸ್ ಕಳುಹಿಸಿದ್ದರು. ಆದರೆ, ಕೋರ್ಟ್​ ನಲ್ಲಿ ಹಾಸ್ಟೆಲ್ ಹುಡುಗರ ತಂಡ ಜಯಗಳಿಸಿದೆ.

ಇದನ್ನು ಓದಿ : ದಲಿತರ ವಿರುದ್ಧ ಮಾಡಿದ್ದಾರೆ ಅಂತ ಕರುಣೆ ತೋರಿಸಿದ್ದಾರೆ : ಕುಮಾರಸ್ವಾಮಿ ಕೌಂಟರ್

ಹಾಸ್ಟೆಲ್ ಹುಡುಗರ ಪರ ವೇಲನ್ ವಾದ

ಕೋರ್ಟ್​ನಲ್ಲಿ ಇಂದು ನೆಡೆದ ವಿಚಾರಣೆಯಲ್ಲಿ ಹಾಸ್ಟೆಲ್ ಹುಡುಗರ ಪರವಾಗಿ ಲಾಯರ್ ವೇಲನ್ ರವರು ವಾದವನ್ನು ಮಂಡಿಸಿ ಕೇಸ್ ನಲ್ಲಿ ಜಯವಾಗುವಂತೆ ಮಾಡಿದ್ದಾರೆ. ಇದರಿಂದ ಹಾಸ್ಟೆಲ್ ಹುಡುಗರ ಚಿತ್ರದ ವಿರುದ್ದ ಹೋಗಿದ್ದ ರಮ್ಯಾಗೆ ಕೋರ್ಟ್ ನಲ್ಲಿ ಮುಖಭಂಗವಾಗಿದೆ.

ಹಾಸ್ಟೆಲ್ ಹುಡುಗರು ತಂಡದವರು ಯಾವುದೇ ಸಮಸ್ಯೆಯಿಲ್ಲದೆ ಚಿತ್ರವನ್ನು ರಿಲೀಸ್ ಮಾಡಬಹುದು ಎಂದು ಕೋರ್ಟ್ ತಿಳಿಸಿದೆ.

Exit mobile version