Site icon PowerTV

ರಾಹುಲ್ ಗಾಂಧಿ ಸಂಸದರೇ ಅಲ್ಲ : ಆರ್. ಅಶೋಕ್

ಬೆಂಗಳೂರು : ರಾಹುಲ್ ಗಾಂಧಿ ಸಂಸದರೇ ಅಲ್ಲ ಎಂದು ಕೈ ನಾಯಕರ ವಿರುದ್ಧ ಮಾಜಿ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಎಸ್​ ಅಧಿಕಾರಿಗಳು ಬಡವರಿಗೆ ಕೆಲಸ ಮಾಡಲು ಇರೋದು. ಆದ್ರೆ, ಅವರನ್ನು ಜೈಲು ಹಕ್ಕಿ, ಜಾಮೀನು (ಬೇಲ್) ಮೇಲೆ ಇದ್ದವರು, ಆಲಿಬಾಬ ಮತ್ತು 40 ಜನ ಕಳ್ಳರಿಗೆ ಸೇವೆ ಮಾಡಲು ನಿಯೋಜಿಸಿದ್ದರು ಎಂದು ಕುಟುಕಿದರು.

ರಾಹುಲ್ ಗಾಂಧಿ ಸಂಸದರೇ ಅಲ್ಲ. ಜೋಸೆಫ್ ಎಲ್ಲಿದ್ದಾನೆ? ಅವರು ಎಲೆಕ್ಟ್ ಆಗಿದ್ದಾರಾ? ಅವರಿಗೆ ಅಧಿಕಾರಿಗಳ ನೇಮಕ ಮಾಡಿದ್ದೀರಿ. ರಾಷ್ಟ್ರಪತಿ, ನೋಬೆಲ್ ಪುರಸ್ಕಾರ ಪಡೆದವರಿಗೆ ಕೊಡಲಿ. ಅದು ಬಿಟ್ಟು ಇಂತವರಿಗೆ ಕೊಡ್ತೀರಿ. ಬಾಗಿಲು ಒದ್ದ, ಫೈಲ್ ಹರಿದ, ಸ್ಪೀಕರ್ ಕಿತ್ತಾಕಿದವರನ್ನು ರಕ್ಷಣೆ ಮಾಡ್ತೀರಾ? ಎಂದು ಗುಡುಗಿದರು.

ಇದನ್ನೂ ಓದಿ : ತೀಸ್ತಾ ಸೆಟಲ್ವಾಡ್ ಗೆ ಸುಪ್ರೀಂಕೋರ್ಟ್ ಜಾಮೀನು

ನೀವು ಅಕ್ರಮವಾಗಿ ಬಿಲ್ ಪಾಸ್ ಮಾಡಲು ಹೊರಟಿದ್ರಿ. ಅದನ್ನು ಹರಿದುಹಾಕಿದ್ದೇವೆ. ಅವರಿಗೆ ಮಾನ ಇದೆಯಾ ಸಭೆ ನಡೆಸೋಕೆ. ನಮ್ಮನ್ನು ಬೇಕು ಅಂತ, ಬಜೆಟ್ ಲೋಪ ಹೇಳ್ತೀವಿ ಅಂತ ಹೊರಗೆ ಹಾಕಿದ್ದಾರೆ. ಇದು ಕಾಂಗ್ರೆಸ್ ಕುತಂತ್ರ. ಅದಕ್ಕಾಗಿ ನಾವು ರಾಜ್ಯಪಾಲರ ಭೇಟಿ ಮಾಡ್ತೀವಿ ಎಂದು ಹೇಳಿದರು.

ಐಎಎಸ್ ಅಧಿಕಾರಿಗಳ ಬಳಕೆಗೆ ಚೀಫ್ ಸೆಕ್ರೆಟರಿ ಸಹಿ ಮಾಡಿದ್ದಾರಾ? ಅದನ್ನು ಕೇಳಿದ್ದೇವೆ, ಇನ್ನೂ ಆದೇಶ ಕಾಪಿ ಕೊಟ್ಟಿಲ್ಲ. ನಮ್ಮ ಐಎಎಸ್ ಅಧಿಕಾರಿ ಲಲ್ಲೂ ಪ್ರಸಾದ್ ಯಾದವ್ ಕಾರ್ ತೆಗೀತಿದ್ದಾರೆ. ಕಾಂಗ್ರೆಸ್​ಗೆ ನಮ್ಮ ಪ್ರಶ್ನೆ. 48 ಗಂಟೆ ಐಎಎಸ್ ಅಧಿಕಾರಿಗಳ ಬಳಕೆ ಮಾಡಿಕೊಂಡಿದ್ದೀರಾ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.

Exit mobile version