Site icon PowerTV

ಹೃದಯಾಘಾತದಿಂದ ಬ್ಯಾಂಕ್ ಉದ್ಯೋಗಿ ಸಾವು

ಉತ್ತರ ಕನ್ನಡ : ಬ್ಯಾಂಕ್ ಗೆ ಬರುತ್ತಿದ್ದ ಉದ್ಯೋಗಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.

ಪ್ರಕಾಶ್ ಅರವಣಕರ್‌( 40) ಮೃತ ಬ್ಯಾಂಕ್ ಉದ್ಯೋಗಿ. ಇವರು ಕುಮಟ ತಾಲೂಕಿನ ಅಳ್ವೆಕೋಡಿ ಗ್ರಾಮದ ನಿವಾಸಿ. ಮೃತ ಪ್ರಕಾಶ್ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಬರ್ಗಿಯಲ್ಲಿ ಬಸ್ ಇಳಿದು ಬ್ಯಾಂಕ್ ಗೆ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಇನ್ನೇನು ಕಚೇರಿಗೆ ತೆರಳುವ ಹೊತ್ತಿನಲ್ಲೇ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಪ್ರಕಾಶ್ ಅವರನ್ನು ಕುಮಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂದು ಹೋಗಲಾಗುತ್ತಿತ್ತು. ದುರಾದೃಷ್ಟವಶಾತ್ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಉಯ್ಯಾಲೆ ಹಗ್ಗಕ್ಕೆ ಸಿಲುಕಿ ಬಾಲಕ ಸಾವು

ಹೊತ್ತಿ ಉರಿದ ವಿದ್ಯುತ್ ಕಂಬ

ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ಕಂಬ ಹೊತ್ತಿ ಉರಿದ ಘಟನೆ ಕಲಬುರಗಿ ನಗರದ ಖಮರ್ ಕಾಲೋನಿಯಲ್ಲಿ ನಡೆದಿದೆ. ನಿರಂತರ ಮಳೆಯಿಂದ ಮರದ ಕೊಂಬೆಗಳು ವಿದ್ಯುತ್ ಕಂಬದ‌ ಮೇಲೆ ಬಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಕಂಬ ಸುಟ್ಟುಭಸ್ಮವಾಗಿದೆ. ದೊಡ್ಡ ಅನಾಹುತ ತಪ್ಪಿದ್ದು, ಮುಂಜಾಗ್ರತ ಕ್ರಮವಾಗಿ ವಿದ್ಯುತ್ ಕಡಿತ ಮಾಡಲಾಗಿದೆ. ಸ್ಥಳಕ್ಕೆ ಜೆಸ್ಕಾಂ ಸಿಬ್ಬಂದಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Exit mobile version