Site icon PowerTV

ಕಾಂಗ್ರೆಸ್ ತೊಲಗೋ ವರೆಗೂ ಬರಗಾಲ ಹೋಗಲ್ಲ : ಸಿ.ಟಿ ರವಿ

ಬೆಂಗಳೂರು : ಬಿಜೆಪಿ ಇದ್ದಾಗ ಮಳೆಯೋ ಮಳೆ ಇತ್ತು. ಕಾಂಗ್ರೆಸ್ ತೊಲಗೋ ವರೆಗೂ ಬರಗಾಲ ಹೋಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬರಗಾಲ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಅವರು ಅಧಿಕಾರದಲ್ಲಿ ಇದ್ದಾಗ ಮಳೆಯೇ ಇಲ್ಲ ಎಂದು ಕುಟುಕಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ದೂರು ಕೊಡಲಾಗಿದೆ. ಐಎಎಸ್ ಅಧಿಕಾರಿಗಳನ್ನು ರಾಜಕೀಯ ಕಾರ್ಯಕ್ರಮಕ್ಕೆ ಬಳಕೆ ಮಾಡಿರೋ ದೂರು ನೀಡಲಾಗಿದೆ. ರಾಜ್ಯಪಾಲರು ವರದಿ ತರಿಸಿಕೊಂಡು ಮಾತಾಡೋದಾಗಿ ಹೇಳಿದ್ದಾರೆ ಎಂದರು.

ಇದನ್ನೂ ಓದಿ : ಸಿಂಗಾಪುರ ಬರ್ತದಾ? ಮಂಗಾಪುರ ಬರ್ತದಾ? : ಡಿಕೆಶಿಗೆ ಆರ್. ಅಶೋಕ್ ಕೌಂಟರ್

ಅವ್ರು ಬಂದಿದ್ದದ್ದು ರಾಜಕೀಯ ಮಾಡಲು

ಹಿಂದೆ ಪೇಪರ್ ಹರಿದಿದ್ದಕ್ಕಾಗಿ ಯಾರನ್ನೂ ಸಸ್ಪೆಂಡ್ ಮಾಡಿಲ್ಲ. ಹಾಗೆ ಮಾಡೋದಾಗಿದ್ರೆ ಧರ್ಮೇಗೌಡರನ್ನು ಚೇರಿಂದಲೇ ಹೊರಗೆ ಹಾಕಿರೋರನ್ನು ಸಸ್ಪೆಂಡೇ ಮಾಡಬೇಕಿತ್ತು. ನಿನ್ನೆ ನಡೆದ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ಅಲ್ಲ. ಅವರು ಬಂದಿದ್ದದ್ದು ರಾಜಕೀಯ ಮಾಡಲು ಎಂದು ಚಾಟಿ ಬೀಸಿದರು.

ಐಎಎಸ್ ಅಧಿಕಾರಿಗಳನ್ನ ಕೊಡೋದು ಯಾವ ನಿಯಮದಲ್ಲೂ ಇಲ್ಲ. ಅವರಿಗೆ ಐಎಎಸ್ ಅಧಿಕಾರಿ ಕೊಡಲು ಹೇಗೆ ಸಾಧ್ಯ? ಬಿಲ್ ಮಂಡಿಸಿದಾಗ, ಅದನ್ನು ಹರಿದು ವಿರೋಧಿಸಲಾಗಿದೆ ಎಂದು ಸಿ.ಟಿ ರವಿ ಸ್ಪಷ್ಟನೆ ನೀಡಿದರು.

Exit mobile version