Site icon PowerTV

5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಚಿಕ್ಕೋಡಿ : 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಉಪ ತಹಶೀಲ್ದಾರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.

ನಿಪ್ಪಾಣಿ ಉಪ ತಹಶೀಲ್ದಾರ್ ಅಭಿಜೀತ್ ಬೋಂಗಾಳೆ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಉಪ ತಹಶೀಲ್ದಾರ್ ಜೊತೆ ಗ್ರಾಮ ಲೆಕ್ಕಾಧಿಕಾರಿ ಪಾರೀಸ ಸತ್ತಿ ಕೂಡ ಬಲೆಗೆ ಬಿದ್ದಿದ್ದಾರೆ.

ತಲಾ 5000 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಡಿಎಸ್ಪಿ ರಘು ನೇತೃತ್ವದಲ್ಲಿ ದಾಳಿ ನಡೆಸಿ ಇವರಿಬ್ಬರನ್ನೂ ಖೆಡ್ಡಾಗೆ ಬೀಳಿಸಲಾಗಿದೆ. ಉಪ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರೂ ಆಸ್ತಿಯ ಹೆಸರು ಬದಲಾವಣೆ ಮಾಡಲು ನಿಪ್ಪಾಣಿಯ ರಾಜಕುಮಾರ ತುಕಾರಾಮ್ ಶಿಂಧೆ ಎಂಬುವವರ ಬಳಿ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ಅವರು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು.

Exit mobile version