Site icon PowerTV

ಇದು ಹಳೆ ವೈನು, ಹೊಸ ಬಾಟಲ್ ಅಷ್ಟೇ : ಸಿ.ಟಿ ರವಿ ಕೌಂಟರ್

ಬೆಂಗಳೂರು : ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ I.N.D.I.A (ಇಂಡಿಯಾ ಒಕ್ಕೂಟ) ಎಂದು ಹೆಸರಿಟ್ಟಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೌಂಟರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳೆ ವೈನು, ಹೊಸ ಬಾಟಲ್’ ಎಂಬ ಗಾದೆ ಮಾತಿದೆ. ಇದು ಹೊಸ ಬಾಟಲ್ ಅಲ್ಲ ಹೊಸ ಲೇಬಲ್ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳ ಇಂಡಿಯಾ ಒಕ್ಕೂಟ ರೆಡಿಯಾಗಿದೆ. ಅದೇ ಕರೆಪ್ಟ್ ಗ್ಯಾಂಗ್, ಅದೇ ಭ್ರಷ್ಟಾಚಾರಿಗಳ‌ ಕೂಟ, ಯಾರು ಹೊಸಬರು ಇದಾರೆ? ಬಹುತೇಕರು ಯುಪಿಎ(UPA) ಆಡಳಿತಾವಧಿಯಲ್ಲಿ ಲೂಟಿ ಮಾಡಿದ ಗ್ಯಾಂಗ್​ ಇಂಡಿಯಾ ಇಕ್ಕೂಟದಲ್ಲಿದೆ ಎಂದು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಏನು ಚಪ್ಪರಾಸಿ ಅಲ್ವಲ್ಲಾ? : ಸಿ.ಟಿ ರವಿ ವಾಗ್ದಾಳಿ

ಕಡು ಭ್ರಷ್ಟಾಚಾರ ಕೂಟ

ಇದೊಂದು ಕಡು ಭ್ರಷ್ಟಾಚಾರದ ಕೂಟ ಅಷ್ಟೇ. ಲೇಬಲ್ ಚೇಂಜ್ ಮಾಡಿಕೊಂಡು ಜನರಿಗೆ ಮೋಸ ಮಾಡಲು ಹೊರಟಿದೆ. ರಾಮಾಯಣದಲ್ಲಿ ಸೀತೆಯನ್ನು ಒಲಿಸಿಕೊಳ್ಳಲು ರಾವಣ ರಾಮನ ವೇಶದಲ್ಲಿ ಬಂದಿದ್ದ ಭ್ರಷ್ಟರ ಕೂಟ ಚೇಂಜ್ ಮಾಡಿಕೊಂಡು ಜನರಿಗೆ ಮೋಸ ಮಾಡಲು ಬಂದಿದೆ. A ಯಿಂದ Z ವರೆಗೂ ಸ್ಕ್ಯಾಮ್ ಮಾಡಿದ್ದು ಇವರು ಎಂದು ಸಿ.ಟಿ ರವಿ ಕುಟುಕಿದ್ದಾರೆ.

Exit mobile version