Site icon PowerTV

ರೈತರ ನಿದ್ದೆಗೆಡಿಸಿದ ಕಳ್ಳರು : 20 ಪಂಪಸೆಟ್ ವೈರ್, ಸ್ಟಾಟರ್ ಕಳ್ಳತನ

ಯಾದಗಿರಿ : ಪಂಪಸೆಟ್ ಕಳ್ಳರು ಕಾಲುವೆ ಭಾಗದ ರೈತರ ನಿದ್ದೆಗೆಡಿಸಿದ್ದಾರೆ. 20 ಮೋಟಾರಗಳ ವೈರ್ ಹಾಗೂ ಸ್ಟಾಟರ್​ಗಳನ್ನು ಕಳ್ಳತನ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಹಾಗೂ ಕೆಂಭಾವಿ ಗ್ರಾಮಗಳಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಪಂಪಸೆಟ್ ಕಳೆದುಕೊಂಡ ರೈತರಿಂದ ಪಂಪಸೆಟ್ ಹುಡುಕಿ ಕೊಡುವಂತೆ ಪೋಲಿಸರ ಮೊರೆ ಹೋಗಿದ್ದಾರೆ.

ಶಹಪುರ ಶಾಖಾ ಕಾಲುವೆಯ ಭಾಗದ ಕೆಬಿಜೆಎನ್ಎಲ್ ಕಾಲುವೆ ಭಾಗದಲ್ಲಿ ಮಳೆ ಕೊರತೆ ಹಿನ್ನೆಲೆ ಬೆಳೆ ಉಳಿಸಿಕೊಳ್ಳಲು ರೈತರು ಕಾಲುವೆಗೆ ಪಂಪಸೆಟ್ ಅಳವಡಿಕೆ ಮಾಡಿದ್ದರು. ರೈತರು ಅಳವಡಿಸಿದ್ದ 20 ಪಂಪಸೆಟ್​ಗಳ ವೈರ್ ಹಾಗೂ ಸ್ಟಾಟರ್​ಗಳನ್ನ ಕಳ್ಳರು ಕದ್ದೊಯ್ದಿದ್ದಾರೆ.

ಕಳ್ಳರು ಪ್ರತಿದಿನ ರಾತ್ರಿ ಬಂದು ವೈರ್ ಹಾಗೂ ಸ್ಟಾಟರ್ ಕಳ್ಳತನ ಮಾಡಿಕೊಂಡು ಹೋಗ್ತಿದ್ದಾರೆ. ಒಂದು ಪಂಪಸೆಟ್ ಬೆಲೆ 50ರಿಂದ 60 ಸಾವಿರ ರೂಪಾಯಿ ಆಗುತ್ತದೆ. ಹೀಗೆ ಕಳ್ಳತನ ಮಾಡಿಕೊಂಡು ಹೋದ್ರೆ ನಾವು ಹೇಗೆ ಕೃಷಿ ಮಾಡೋದು ಅಂತ ರೈತರ ಅಳಲು ತೋಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಕಾಲುವೆ ಭಾಗದಲ್ಲಿನ ರೈತರ ಪಂಪಸೆಟ್​ಗಳಿಗೆ ಭದ್ರತೆ ಒದಗಿಸಿಲು ರೈತರು ಪೋಲಿಸರ ಮೊರೆ ಹೋಗಿದ್ದಾರೆ.

Exit mobile version