Site icon PowerTV

‘INDIA’ ಹೆಸರಿನಲ್ಲಿ ಖದೀಮ ಕಂಪನಿ ಹುಟ್ಟಿಕೊಳ್ಳುತ್ತವೆ : ಬಿಜೆಪಿ

ಬೆಂಗಳೂರು : ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ INDIA ಎಂಬ ಹೆಸರಿಟ್ಟಿರುವುದಾಗಿ ಘೋಷಿಸಿರುವ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಭಾರತ ಸಮೃದ್ಧವಾದಾಗಲೆಲ್ಲಾ INDIA ಹೆಸರಿನಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತ್ತವೆ. ಆದರೆ, ಈ ಕಂಪನಿ ಸದ್ಯದಲ್ಲೇ ಬರ್ಕಾಸ್ತಾಗಲಿರುವುದು ನಿಶ್ಚಿತ ಎಂದು ಕುಟುಕಿದೆ.

ಅಂದು ಬ್ರಿಟಿಷ್‌ ಈಸ್ಟ್‌ INDIA ಕಂಪನಿ ಸ್ಥಾಪಿತವಾಗಿ ಭಾರತದ ತುಂಡರಸರನ್ನೆಲ್ಲಾ ಸೇರಿಸಿ ದೇಶವನ್ನು ಕೊಳ್ಳೆ ಹೊಡೆಯಿತು. ಇಂದು ಮತ್ತೊಮ್ಮೆ ಸಮೃದ್ಧ ಭಾರತವನ್ನು ಕೊಳ್ಳೆ ಹೊಡೆಯಲು ಹೊಂಚಾಕಿ ಇಟಲಿ ಈಸ್ಟ್‌ INDIA ಕಂಪನಿಯ ಘೋಷಣೆಯಾಗಿದೆ.

ಇದನ್ನೂ ಓದಿ : ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ INDIA ಹೆಸರು : ಮಲ್ಲಿಕಾರ್ಜುನ ಖರ್ಗೆ

ಬಿಜೆಪಿಗೆ ನಡುಕ ಹುಟ್ಟಿದೆ

ದೇಶದ ಹಲವು ದಿಗ್ಗಜ ನಾಯಕರು ಬೆಂಗಳೂರಿನ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ಜಾತ್ಯತೀತ ಹಾಗೂ ಸಂವಿಧಾನ ಪರ ಸಿದ್ದಾಂತವನ್ನು ಹೊಂದಿರುವ ಸಮಾನಮನಸ್ಕ ಪಕ್ಷಗಳು ಒಂದಾಗಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಕೈಜೋಡಿಸಿವೆ. ಈ ಬೆಳವಣಿಗೆಯಿಂದ ಬಿಜೆಪಿಗೆ ನಡುಕ ಹುಟ್ಟಿದೆ. ಈ ದೇಶದಲ್ಲಿ ಜಾತ್ಯತೀತ ಪಕ್ಷಗಳು ಒಟ್ಟಾದರೆ ಸಂವಿಧಾನ ವಿರೋಧಿಗಳು ಮಣ್ಣು ಮುಕ್ಕುವುದು ನಿಶ್ಚಿತ ಎಂದು ಕಾಂಗ್ರೆಸ್ ಛೇಡಿಸಿದೆ.

Exit mobile version