Site icon PowerTV

ಧೋನಿ ಫ್ಯಾಷನ್ ನೋಡಿ ಮನಸೋತು ಹೋದೆ : ವೆಂಕಟೇಶ್ ಪ್ರಸಾದ್

ಬೆಂಗಳೂರು : ಭಾರತ ತಂಡದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರ ಆಟೋಮೊಬೈಲ್‌ ಕಲೆಕ್ಷನ್‌ ನೋಡಿ ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ವೆಂಕಟೇಶ್‌ ಪ್ರಸಾದ್ ಒಂದು ಕ್ಷಣ ತಬ್ಬಿಬ್ಬಾಗಿ ಹೋಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯವರ ಈ ಕಲೆಕ್ಷನ್‌ ನೋಡಿ ತಾನು ಮನಸೋತಿರುವುದಾಗಿ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. ಅಲ್ಲದೆ, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಧೋನಿಯವರ ಬೈಕ್ ಹಾಗೂ ಕಾರು ಕಲೆಕ್ಷನ್‌ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಧೋನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್

ತಲಾ ಫ್ಯಾಷನ್’ಗೆ ವೆಂಕಿ ಫಿದಾ

ಇದು ರಾಂಚಿಯ ಅವರ ನಿವಾಸದಲ್ಲಿರುವ ಬೈಕ್ ಮತ್ತು ಕಾರು ಸಂಗ್ರಹದ ಒಂದು ನೋಟವಾಗಿದೆ. ಈ ವ್ಯಕ್ತಿಯ ಫ್ಯಾಷನ್ ನೋಡಿ ನಾನು ಮನಸೋತು ಹೋದೆ ಎಂದು ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ.

ಒಬ್ಬ ವ್ಯಕ್ತಿಯಲ್ಲಿ ನೋಡಿದ ಕ್ರೇಜಿ ಉತ್ಸಾಹಗಳಲ್ಲಿ ಇದು ಒಂದಾಗಿದೆ. ಎಂತಹ ಕಲೆಕ್ಷನ್ ಹಾಗೂ ಎಂತಹ ಅದ್ಭುತ ವ್ಯಕ್ತಿ ಎಂ.ಎಸ್ ಧೋನಿ. ಓರ್ವ ಅತ್ಯುತ್ತಮ ಸಾಧಕ ಹಾಗೂ ಅದಕ್ಕಿಂತ ಮಿಗಿಲಾಗಿ ಧೋನಿ ಅತ್ಯದ್ಭುತ ವ್ಯಕ್ತಿಯಾಗಿದ್ದಾರೆ ಎಂದು ತಲಾ ಧೋನಿಯನ್ನು ಹಾಡಿ ಹೊಗಳಿದ್ದಾರೆ.

Exit mobile version