Site icon PowerTV

ಹೆತ್ತ ತಂದೆ ತಾಯಿಯನ್ನೇ ರಾಡ್​ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಮಗ!

ಬೆಂಗಳೂರು : ಕುಡಿದ ಮತ್ತಿನಲ್ಲಿ ಮಗನೊಬ್ಬ ತನ್ನ ಹೆತ್ತ ತಂದೆ ತಾಯಿಯನ್ನೆ ರಾಡ್​ನಿಂದ ಒಡೆದು ಕೊಂದ ಘಟನೆ ಕೊಡಿಗೆಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಸೀಮೆಎಣ್ಣೆ ಸುರಿದು ಹೆತ್ತ ಮಗನನ್ನೇ ಕೊಂದ ತಾಯಿ!

ಭಾಸ್ಕರ್ ಮತ್ತು ಶಾಂತಮ್ಮ ಮೃತ ದುರ್ದೈವಿ ಪೋಷಕರು, ತನ್ನ ತಂದೆ ತಾಯಿಯನ್ನ ಕೊಂದ ಆರೋಪಿ ಶರತ್​ (26) ಸದ್ಯ ತಲೆ ಮರೆಸಿಕೊಂಡಿದ್ದಾನೆ.

ಮಂಗಳೂರು ಮೂಲದ ಭಾಸ್ಕರ್ ಮತ್ತು ಶಾಂತಮ್ಮ ದಂಪತಿ ಕೆಲಸದ ನಿಮಿತ್ತ ಕಳೆದ ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು, ತಾಯಿ ಶಾಂತಮ್ಮ ಕೇಂದ್ರ ಸರ್ಕಾರದ ಸಿಬ್ಬಂದಿಯಾಗಿದ್ದ ಮತ್ತು ತಂದೆ ಖಾಸಗಿ ಕ್ಯಾಂಟೀನ್​ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು, ಈ ದಂಪತಿಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗ ಕೆಲಸಕ್ಕೆ ಹೋಗುತ್ತಿದ್ದ ಮತ್ತು ಇನ್ನೊಬ್ಬಮಗ ಶರತ್​ ಮನೆಯಲ್ಲಿಯೇ ಇರುತ್ತಿದ್ದ.

ಸೋಮವಾರ ಸಂಜೆ ಮನೆಗೆ ಕುಡಿದು ಬಂದು ಗಲಾಟೆ ಮಾಡಿದ್ದಾನೆ, ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ತಂದೆ ತಾಯಿ ಇಬ್ಬರನ್ನೂ ರಾಡ್​ನಿಂದ ಹೊಡೆದು ಹತ್ಯೆ ಮಾಡಿ, ಬಳಿಕ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ, ಇಂದು ಬೆಳಗ್ಗೆ ಹಿರಿಯ ಮಗ ತನ್ನ ತಾಯಿಯ ಮೊಬೈಲ್​ಗೆ ಕರೆ ಮಾಡಿದಾಗ ಯಾರು ಕರೆ ಸ್ವೀಕರಿಸದ ಹಿನ್ನೆಲೆ ಪಕ್ಕದ ಮನೆಯವರಿಗ ಕರೆ ಮಾಡಿ ವಿಚಾರಿಸಲು  ಹೇಳಿದಾಗ ಎರಡು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಭೇಟಿ ಪರಿಶೀಲನೆ ನಡೆಸುತ್ತಿದ್ದ ಹೆಚ್ಚಿನ ಮಾಹಿತಿಗೆ ಕಲೆಹಾಕುತ್ತಿದ್ದಾರೆ.

Exit mobile version