Site icon PowerTV

ಸುದೀಪ್ ಅವರೇ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ : ಸಾ.ರಾ. ಗೋವಿಂದ್

ಬೆಂಗಳೂರು : ಸುದೀಪ್ ಅವರಲ್ಲಿ ನಾನು ಮನವಿ ಮಾಡುತ್ತೇನೆ. ನಾನು ಸಾವಿರಾರು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಇಂತಹ ಸಮಸ್ಯೆಗಳು ಬಂದಾಗ ಸಂಧಾನ ಸಮಿತಿಯನ್ನು ನೋಡಬೇಕು ಎಂದು ಫಿಲ್ಮ್ ಚೇಂಬರ್​​​ನ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರನ್ನ ಸಿನಿಮಾದ ಹಣದ ವಿಚಾರವಾಗಿ ನಾನು ಇಬ್ಬರನ್ನೂ ಕರೆಯಿಸಿ ಮಾತಾಡಿದ್ದೆ. ಇದೀಗ ಹಣದ ವಿಷಯಕ್ಕೆ ದೊಡ್ಡದು ಮಾಡುವುದು ಸರಿಯಲ್ಲ ಎಂದರು.

ಇನ್ನು ಎಂ.ಎನ್ ಕುಮಾರ್ ಹೇಳಿದ ತಕ್ಷಣ ನಾನು ಹಣ ಕೊಡಿಸಲು ಸಾಧ್ಯವಿಲ್ಲ. ಇಂದಿಗೂ ಕಾಲ ಮಿಂಚಿಲ್ಲ. ಸುದೀಪ್​ ಅವರೇ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನೀವೇ ಸಮಸ್ಯೆ ಬಗೆಹರಿಸಿದ್ರೆ ಇನ್ನೂ ಒಳ್ಳೆಯದು ಎಂದು ತಿಳಿ ಹೇಳಿದ್ದಾರೆ.

ಇದನ್ನೂ ಓದಿ : ಕಿಚ್ಚನ ಪರ ವೀರಕಪುತ್ರ ಶ್ರೀನಿವಾಸ್ ಬ್ಯಾಟಿಂಗ್ : ಕಳಚಿದ ಸೂರಪ್ಪ ಬಾಬು ಮುಖವಾಡ

ಹಣ ಕೊಟ್ಟಿರುವುದಕ್ಕೆ ಸಾಕ್ಷಿಗಳಿವೆ ಎಂದು ನಿರ್ಮಾಪಕ ಕುಮಾರ್​ ಹೇಳಿದ್ದಾರೆ. ಹಾಗಾಗಿ, ಸುದೀಪ್​​ ಕೋರ್ಟ್​ನಲ್ಲಿ ಹಾಕಿರುವ ಮಾನನಷ್ಟ ಕೇಸನ್ನು ವಾಪಸ್​ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.

ಸುದೀಪ್ ನನ್ನ ಆತ್ಮೀಯರು

ನಾನು‌ ನಿರ್ಮಾಪಕನಾಗಿ ಬಂದಿದ್ದೇನೆ, ಸುದೀಪ್ ಅವರು ನನ್ನ ಆತ್ಮೀಯರು ಎಂದು ನಿರ್ಮಾಪಕ ಎಂ.ಎನ್​​​. ಕುಮಾರ್ ಹೇಳಿದ್ದಾರೆ. ಏನೇ ಸಮಸ್ಯೆಗಳಿದ್ದರೂ ವಾಣಿಜ್ಯ ಮಂಡಳಿಗೆ ಬಂದೇ ಬಗೆಹರಿಸಿ. ಇದೇ ಮೊದಲ ಬಾರಿ ಗಲಾಟೆ ಆಗ್ತಾ ಇಲ್ಲ. ಇಲ್ಲಿಯವರೆಗೆ ಆಗಿರೋದು ಆಗೋಯ್ತು.‌‌ ಮುಂದೆ ಆಗೋದ್ರ ಬಗ್ಗೆ ಮಾತ್ರ ಮಾತಾಡೋಣ. ಹೆಬ್ಬುಲಿ ಸಿನಿಮಾ ವಿಚಾರವನ್ನು ನಾವು ಅಮೇಲೆ ನೋಡೋಣ ಎಂದರು.

Exit mobile version