Site icon PowerTV

ಪೌರಾಯುಕ್ತರ ನಿರ್ಲಕ್ಷ್ಯಕ್ಕೆ ಬೇಸತ್ತು ಪೊರಕೆ ಹಿಡಿದು ಸ್ವಚ್ಛತೆಗಿಳಿದ ಜಿಲ್ಲಾಧಿಕಾರಿ!

ಚಿಕ್ಕಬಳ್ಳಾಪುರ: ನಗರಸಭೆ ಆಯುಕ್ತರ ನಿರ್ಲಕ್ಷ್ಯಕ್ಕೆ ಬೇಸತ್ತು ನಗರ ಸ್ವಚ್ಚಗೊಳಿಸಲು ಪೌರಕಾರ್ಮಿಕರ ಜೊತೆಗೆ ಖುದ್ದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಪೊರಕೆ ಹಿಡಿದು ರಸ್ತೆಗಿಳಿದಿರುವ ಘಟನೆ ಮಂಗಳವಾರ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ, ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ : ಹೆಚ್​ಡಿಕೆ ಟ್ವೀಟ್​

ಚಿಕ್ಕಬಳ್ಳಾಪುರ ನಗರ ಗಬ್ಬು ನಾರುತ್ತಿದ್ದರೂ ಮೌನಕ್ಕೆ ಶರಣಾಗಿದ್ದ ನಗರಸಭೆ ಆಯುಕ್ತೆ ಪಂಪಾಶ್ರೀ ಯವರಿಗೆ ನಗರ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಸೂಚಿಸಿದ್ದ ಜಿಲ್ಲಾಧಿಕಾರಿಗಳ ಮಾತಿಗೂ ಎಚ್ಚೆತ್ತುಕೊಳ್ಳದ ಹಿನ್ನೆಲೆ ಇಂದು ಬೆಳ್ಳಂ ಬೆಳಗ್ಗೆ ಪೌರಕಾರ್ಮಿಕರ ಜೊತೆಗೆ ಪೊರಕೆ ಹಿಡಿದ ಜಿಲ್ಲಾಧಿಕಾರಿಗಳು ಬೀದಿಗಿಳಿದು ಸ್ವಚ್ಚತೆಗೆ ಮುಂದಾಗಿದ್ದಾರೆ.

ಪ್ರತಿ ಮಂಗಳವಾರ ಹಸಿರು ಚಿಕ್ಕಬಳ್ಳಾಪುರ ಸ್ವಚ್ಛ ಚಿಕ್ಕಬಳ್ಳಾಪುರ ಅಭಿಯಾನದಡಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಸ್ವಚ್ಛತೆಯಲ್ಲಿ ಭಾಗಿಯಾಗುತ್ತಿದ್ದಾರೆ.

Exit mobile version