Site icon PowerTV

Good News : ಶೀಘ್ರದಲ್ಲೇ ಬೂಮ್ರಾ ತಂಡಕ್ಕೆ ಕಮ್ ಬ್ಯಾಕ್

ಬೆಂಗಳೂರು : ಭಾರತ ತಂಡದ ವೇಗಿ ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಶೀಘ್ರದಲ್ಲೇ ಕಂಬ್ಯಾಕ್ ಮಾಡುವುದನ್ನು ಘೋಷಿಸಿದ್ದಾರೆ.

ಹೌದು, ಖ್ಯಾತ ಗಾಯಕಿ ಸ್ಕೈಲರ್ ಗ್ರೇ ಅವರ ಕಮಿಂಗ್ ಹೋಮ್ ಗೀತೆಯ ಮೂಲಕ ಜಸ್​ಪ್ರೀತ್ ಬುಮ್ರಾ ಕಂಬ್ಯಾಕ್ ಬಗ್ಗೆ ತಿಳಿಸಿರುವುದು ವಿಶೇಷ.

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬುಮ್ರಾ ಹಂಚಿಕೊಂಡಿದ್ದು, ಈ ಮೂಲಕ ಶೀಘ್ರದಲ್ಲೇ ತಂಡಕ್ಕೆ ಪುನರಾಗಮನ ಮಾಡುವುದಾಗಿ ತಿಳಿಸಿದ್ದಾರೆ. ಅಭಿಮಾನಿಗಳು ಬುಮ್ರಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಇದನ್ನೂ ಓದಿ : ಅಶ್ವಿನ್ ನಂಬರ್ 1, ಟಾಪ್ 10ನಲ್ಲಿ ಜಡೇಜಾ-ಬುಮ್ರಾ

ಜಸ್​ಪ್ರೀತ್ ಬುಮ್ರಾ ಸೆಪ್ಟೆಂಬರ್ 19, 2022ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಬಾರಿ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅವರು ಬೆನ್ನು ನೋವಿಗೆ ತುತ್ತಾಗಿದ್ದರು. ಇದಾದ ಬಳಿಕ ಬುಮ್ರಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇದರಿಂದಾಗಿ ಪ್ರಮುಖ ಟೂರ್ನಿಗಳಾದ ಏಷ್ಯಾಕಪ್, ಟಿ20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯಗಳನ್ನು ಜಸ್​ಪ್ರೀತ್ ಬುಮ್ರಾ ತಪ್ಪಿಸಿಕೊಂಡಿದ್ದರು. ಇದೀಗ ಟೀಂ ಇಂಡಿಯಾ ಮತ್ತೊಂದು ಏಷ್ಯಾಕಪ್​ ಹೊಸ್ತಿಲಲ್ಲಿದೆ. ಜಸ್​ಪ್ರೀತ್ ಬುಮ್ರಾ  ಕಂಬ್ಯಾಕ್ ತಂಡಕ್ಕೆ ಬೂಸ್ಟ್ ನೀಡಲಿದೆ.

Exit mobile version