Site icon PowerTV

ನಾನು ನನ್ನ ಮಗನನ್ನು ಬಿಟ್ಟುಕೊಡಲ್ಲ : ಕಿಚ್ಚನ ಪರ ಕ್ರೇಜಿಸ್ಟಾರ್ ಬ್ಯಾಟ್

ಬೆಂಗಳೂರು : ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎನ್.ಕುಮಾರ್ ಆರೋಪಗಳ ವಿಚಾರದಲ್ಲಿ ಕೊನೆಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಎಂಟ್ರಿ ಕೊಟ್ಟಿದ್ದಾರೆ.

ಇಂದು ಮಧ್ಯಾಹ್ನ ಕೆಲ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಾಪಕ ಎನ್.ಕುಮಾರ್ ಹಾಗೂ ಸುದೀಪ್ ನಡುವಿನ ಮನಸ್ತಾಪ ಕುರಿತು ಚರ್ಚಿಸಿದ್ದಾರೆ.

ನಿರ್ಮಾಪಕರ ಜೊತೆ ಮಾತನಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರವಿಚಂದ್ರನ್, ನನ್ನ ಮಗನ ಮೇಲೆ ಆರೋಪ ಮಾಡಲಾಗಿದೆ. ನಾನು ನನ್ನ ಮಗನನ್ನು ಬಿಟ್ಟುಕೊಡಲ್ಲ ಎಂದು ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ : ನನ್ನ ಸ್ಟಾರ್ ಗಿರಿ ಯಾರಿಂದಲೂ ಅಳಿಸೋಕೆ ಆಗಲ್ಲ : ಕಿಚ್ಚ ಸುದೀಪ್

ಸುದೀಪ್​​​ಗೆ ನೋವಾಗಿರೋದು ನಿಜ

ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನು ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್​​​ಗೆ ನೋವಾಗಿರೋದು ನಿಜ ಎಂದು ರವಿಚಂದ್ರನ್ ಹೇಳಿದ್ದಾರೆ.

ನಿರ್ಮಾಪಕ ಎನ್. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್​​ನಲ್ಲಿದ್ದೆ. ಹಾಗಾಗಿ, ಕರೆ ಸ್ವೀಕರಿಸಲು ಆಗಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದು ತಿಳಿಸಿದ್ದಾರೆ.

Exit mobile version