Site icon PowerTV

ದೇಶಕ್ಕೆ ಮೋದಿ ಬೇಕು, ಇಲ್ಲವಾದ್ರೆ ನಮ್ಮ ರಾಜ್ಯ ತಾಲಿಬಾನ್ ಆಗುತ್ತೆ : ಪ್ರಮೋದ್ ಮುತಾಲಿಕ್

ಬೆಳಗಾವಿ : ದೇಶಕ್ಕೆ ನರೇಂದ್ರ ಮೋದಿ ಬೇಕು, ದೇಶ ಸುರಕ್ಷಿತ ಇದ್ದರೆ ರಾಜ್ಯಗಳು ಸುರಕ್ಷಿತ ಇರುತ್ತವೆ. ಇಲ್ಲವಾದರೆ ನಮ್ಮ ರಾಜ್ಯವೂ ತಾಲಿಬಾನ್ ಆಗಲಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀರಾಮ ಸೇನೆಯಿಂದಲೂ ‘ಮೋದಿ ಗೆಲ್ಲಿಸಿ, ದೇಶ ಉಳಿಸಿ’ ಅಭಿಯಾನ ಆರಂಭಿಸುತ್ತೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮಣಿಸಲು ಪ್ರತಿಪಕ್ಷಗಳು ಒಗ್ಗೂಡುತ್ತಿವೆ. ಪ್ರತಿಪಕ್ಷಗಳ ತಂತ್ರ ಫಲಿಸಲ್ಲ. ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ ಹಾಗೂ ಪಾರದರ್ಶಕ ವ್ಯಕ್ತಿ. ಅವರನ್ನು ಮಣಿಸಲು ಇಡೀ ಪ್ರತಿಪಕ್ಷಗಳು ಒಗ್ಗೂಡಿರುವುದು ದೇಶಕ್ಕೆ ದೊಡ್ಡ ಅಪಾಯಕಾರಿ. ಎಷ್ಟೇ ಒಗ್ಗಟ್ಟಾದರೂ ಮೋದಿ ಸೋಲಿಸಲು ಸಾಧ್ಯವಿಲ್ಲ ಎಂದ ಮುತಾಲಿಕ್ ಛೇಡಿಸಿದರು.

ಇದನ್ನೂ ಓದಿ : 3ನೇ ಬಾರಿ ಮೋದಿ ಪ್ರಧಾನಿ ಆಗೋದನ್ನು ತಡೆಯಲು ಸಾಧ್ಯವಿಲ್ಲ : ಬಿ.ವೈ ವಿಜಯೇಂದ್ರ

ಪ್ರತಿಪಕ್ಷಗಳಿಗೆ ಮುಸ್ಲಿಂ ತುಷ್ಠೀಕರಣ ಬೇಕಿದೆ

ಪ್ರತಿಪಕ್ಷಗಳು ಏನೇ ಸರ್ಕಸ್ ಮಾಡಿದರೂ ಮೋದಿ ಮಣಿಸಲು ಆಗಲ್ಲ. ಪ್ರತಿಪಕ್ಷಗಳಿಗೆ ಮುಸ್ಲಿಂ ತುಷ್ಠೀಕರಣ ಬೇಕಿದೆಯೇ ಹೊರತು ಹಿಂದುತ್ವ ಬೇಡ. ದೇಶಕ್ಕಾಗಿ ಹೋರಾಡಿದ ಸಾವರ್ಕರ್, ಭಗತ್ ಸಿಂಗ್ ಪಾಠಗಳನ್ನು ಕಾಂಗ್ರೆಸ್ ಪಠ್ಯದಿಂದ ತೆಗೆದಿದ್ದು ಏಕೆ? ಇವರಿಗೆ ಭ್ರಷ್ಟರು, ದೇಶದ್ರೋಹಿಗಳು ಬೇಕೇ ಹೊರತು ದೇಶ ಭಕ್ತರು ಬೇಡ. ರಾಜ್ಯದಲ್ಲಿ ಬಿಜೆಪಿ ನೆಗಟಿವ್ ವೋಟಿನಿಂದ ಕಾಂಗ್ರೆಸ್ ಗೆದ್ದಿದೆಯೇ ಹೊರತು, ಇದು ಕಾಂಗ್ರೆಸ್ ಗೆಲುವಲ್ಲ ಎಂದು ಕುಟುಕಿದರು.

Exit mobile version